ಕೂಗು ನಿಮ್ಮದು ಧ್ವನಿ ನಮ್ಮದು

ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಕಾಣಿಸಿಕೊಂಡ ಬೆಂಕಿ

ಬೆಳಗಾವಿ: ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ದಟ್ಟನೆ ಹೊಗೆ ಆವರಿಸಿದ ಘಟನೆ ಕುಂದಾನಗರಿ ಬೆಳಗಾವಿ ನಗರದ ಚನ್ನಮ್ಮ ವೃತ್ತದಲ್ಲಿ ನಡೆದಿದೆ.
ಖಾಸಗಿ ಕೋ ಆಪರೇಟಿವ್ ಸೊಸೈಟಿ ಬ್ಯಾಂಕ್ ನೌಕರ ವಿಶಾಲ್ ಪಾಟೀಲ್ ಎಂಬುವರಿಗೆ ಸೇರಿದ ಕಾರಿನಲ್ಲಿ ಇವತ್ತು ಬೆಳ್ಳಿಗ್ಗೆ ಕೆಲಸದ ನಿಮಿತ್ತ ಆಫೀಸ್‍ಗೆ ತೆರಳುವ ವೇಳೆಯಲ್ಲಿ ಕಾರಿಗೆ ಬೆಂಕಿ ತಗುಲಿದೆ.

ಬೆಂಕಿ ತಗಲುತ್ತಿದ್ದಂತೆ ಕಾರು ನಿಲ್ಲಿಸಿ ಚಾಲಕ ವಿಶಾಲ್ ಕಾರಿನಿಂದ ಹೊರ ಬಂದು ಪ್ರಾಣ ರಕ್ಷಣೆ ಮಾಡಿಕೊಂಡಿದ್ದಾರೆ. ಬಳಿಕ ಚನ್ನಮ್ಮ ವೃತ್ತದಲ್ಲಿರುವ ಪೊಲೀಸರ ಸಹಕಾರದೊಂದಿಗೆ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾರಿಗೆ ಬೆಂಕಿ ಕಾಣಿಸಿಕೊಂಡಿದ್ದರಿಂದ ಕೆಲ ಕಾಲ ಚನ್ನಮ್ಮ ವೃತ್ತದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು. ಅದೃಷ್ಟವಶಾತ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

error: Content is protected !!