ಕೂಗು ನಿಮ್ಮದು ಧ್ವನಿ ನಮ್ಮದು

ಮಲಬದ್ಧತೆ ನಿಮ್ಮನ್ನು ಬಿಟ್ಟು ಬಿಡದೆ ಕಾಡುತ್ತಿದೆಯೇ? ಹಾಗಾದರೆ ಹೀಗೊಮ್ಮೆ ಮಾಡಿ ನೋಡಿ

ಮಲಬದ್ಧತೆ:  ಇದೊಂದು ಸಾಧಾರಣ ಉಪದ್ರವ. ಮಲಬದ್ಧತೆಯಿಂದ ಉಂಟಾಗುವ ತೊಂದರೆಗಳಲ್ಲಿ ಶರೀರಜನ್ಯ ವಿಷವೇ ಮೂಲ. ಕ್ರಮವಿಲ್ಲದ ದಿನಚರಿ ಮತ್ತು ಉದರದ ಸ್ನಾಯಗಳು ಸಡಗೊಂಡಿರುವಿಕೆ ಮಲಬದ್ಧತೆಗೆ ಕಾರಣ. ವೈದ್ಯರ ಸಲಹೆ ಇಲ್ಲದೆ ಪದೇ ಪದೇ ಅನಗತ್ಯ ವೀರೇಚಕಗಳ ಸೇವನೆ  ಸಾಮಾನ್ಯ ಸ್ಥಿತಿಯನ್ನು ಮತ್ತಷ್ಟು ಹದಗೆಡಿಸುತ್ತದೆ. ಏಕೆಂದರೆ ಇದು ಸ್ನಾಯುವಿನ ಹಿಡಿತವನ್ನೇ ನಾಶಪಡಿಸುತ್ತದೆ.

1)  1 ಅಥವಾ 2 ಗ್ರಾಂ ಅರಿಶಿನದ ಪುಡಿಯನ್ನು  ಬೆಳಿಗ್ಗೆ ಮತ್ತು ಸಾಯಂಕಾಲ ನೀರಿನೊಡನೆ ಊಟ ಮಾಡಿದ ನಂತರ ಸೇವಿಸಿ.
2)  ಹೆಚ್ಚು ತರಕಾರಿಗಳನ್ನುಳ್ಳ ಆರೋಗ್ಯಕರ ಆಹಾರ ಸೇವಿಸಿ.
3)  ಸಾಕಷ್ಟು ಪ್ರಮಾಣದ ನೀರು, ಸ್ವಚ್ಛ ಗಾಳಿಯಲ್ಲಿ ಉದರ ಭಿತ್ತಿಯ ಮಾಂಸಖಂಡಗಳಿಗೆ ಬಿಗಿ ಕೊಡುವಂತ ವ್ಯಾಯಾಮ ಮಾಡಿ.
4)  ಮಲವಿಸರ್ಜನೆಯಲ್ಲಿ ಕ್ರಮಬದ್ಧತೆಯನ್ನು ರೂಢಿಸಿಕೊಳ್ಳಿ.
5)  ಉರಿಯೂತ ಅಥವಾ ಒಳಗಡೆ ಕರುಳಿನಲ್ಲಿ ಮಲಬದ್ಧತೆ ಉಂಟಾಗಬಹುದು. ಪದೇ ಪದೇ ಮಲಬದ್ಧತೆ ಆಗುತ್ತಿದ್ದಲ್ಲಿ, ಇಂತಹ ಸ್ಥಿತಿ ಬಹು ಕಾಲ ಮುಂದುವರೆದಲ್ಲಿ, ಮಲವಿಸರ್ಜನೆಯ ಸಮಯದಲ್ಲಿ ವ್ಯತ್ಯಾಸವಾಗುತ್ತಿದ್ದಲ್ಲಿ ವೈದ್ಯರ ಸಲಹೆ ಅವಶ್ಯ ಪಡೆಯಿರಿ. ಇದು ವಿಶೇಷತಃ  40 ವರ್ಷ ವಯಸ್ಸು ದಾಟಿದವರಿಗೆ ಅನ್ವಯಿಸುತ್ತದೆ.

error: Content is protected !!