ಕೂಗು ನಿಮ್ಮದು ಧ್ವನಿ ನಮ್ಮದು

ಆನೆ ದಾಳಿಗೆ ರೈತ ಬಲಿ

ಆನೇಕಲ್‌: ದನ ಮೇಯಿಸಲು ಹೋದ ರೈತ ಕೂಲಿ ಕಾರ್ಮಿಕನೋರ್ವ ಆನೆ ದಾಳಿಗೆ ಸಿಕ್ಕು ಮೃತಪಟ್ಟದಾರುಣ ಘಟನೆ ಆನೇಕಲ್‌ ಸಾಮಾಜಿಕ ಅರಣ್ಯ ವಲಯ ವ್ಯಾಪ್ತಿಯ ಕಾಡಂಚಿನ ಗ್ರಾಮ ಸೊಳ್ಳೆಪುರ ದೊಡ್ಡಿ ಬಳಿ ನಡೆದಿದೆ. ಅಲಗಪ್ಪ(50) ಕೃಷಿ ಕೂಲಿ ಕಾರ್ಮಿಕ ಮೃತಪಟ್ಟನತದೃಷ್ಟ. ಎಂದಿನಂತೆ ಕಾಡಿಗೆ ದನಗಳನ್ನು ಮೇಯಿಸಲು ಹೋಗುತ್ತಿದ್ದ ಅಲಗಪ್ಪ ನಿನ್ನೆ ಸಹ ಕಾಡಿಗೆ ಹೋದವರು ಸಂಜೆಯಾದರೂ ಮನೆಗೆ ಬರಲಿಲ್ಲ.

ಬಂಧುಗಳು ಸೇರಿದಂತೆ ಗ್ರಾಮಸ್ಥರು ಸುತ್ತಮುತ್ತಲೂ ಎರಡು ದಿನಗಳಿಂದಲೂ ಹುಡುಕಾಟ ನಡೆಸಿದಾಗ ಅಲಗಪ್ಪನ ಕಾಡಂಚಿನಲ್ಲಿ ಪತ್ತೆಯಾಗಿದೆ. ಅಲಗಪ್ಪನ ಮೈಮೇಲೆ ಆನೆಯು ತುಳಿದ ಗಾಯಗಳಾಗಿದ್ದು, ಸ್ಥಳದಲ್ಲಿ ಆನೆಯ ಹೆಜ್ಜೆಯ ಗುರುತು ಕಂಡು ಬಂದಿದೆ. ಘಟನೆ ಸಂಬಂಧ ಬನ್ನೇರುಘಟ್ಟಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗ್ರಾಮಸ್ಥರು ಅರಣ್ಯ ಸಿಬ್ಬಂದಿ ಮೇಲೆ ಆಕ್ರೊಶ ವ್ಯಕ್ತಪಡಿಸಿದರು.

error: Content is protected !!