ಕೂಗು ನಿಮ್ಮದು ಧ್ವನಿ ನಮ್ಮದು

ಬೆಂಗಳೂರಿನ ಈ ಬಡವಾಣೆಗಳಲ್ಲಿ ಜೂ.17 ರಂದು ಪವರ್ ಕಟ್

ಬೆಂಗಳೂರು: ರಾಜಧಾನಿಯ ದಕ್ಷಿಣ ಭಾಗವಾದ ಜಯನಗರ ಉಪವಿಭಾಗ ವ್ಯಾಪ್ತಿಯ (ಸುತ್ತಮುತ್ತಲಿನ) ಹಲುವು ಬಡವಾಣೆಗಳಲ್ಲಿ ನಾಳೆ ರಂದು ವಿದ್ಯುತ್ ವ್ಯತ್ಯಯವಾಗಲಿದೆ ಅಂದು ಜಯನಗರದ ಹಲವು ಬಡಾವಣೆಗಳಲ್ಲಿ ತುರ್ತು ನಿರ್ವಹಣಾ ಕಾರ್ಯ ನಡೆಯುವುದರಿಂದ ಬೆಳಿಗ್ಗೆ 5 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ಐದು ಗಂಟೆಗಳ ಕಾಲ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಬೆಸ್ಕಾಂ ತಿಳಿಸಿದೆ.

ಪವರ್ ಕಟ್ ಆಗುವ ಏರಿಯಾಗಳು
ಜಯನಗರ 1,2,3ನೇ ಬ್ಲಾಕ್, ಜಯನಗರ 4ನೇ ಬ್ಲಾಕ್, ಜಯನಗರ 9ನೇ ಬ್ಲಾಕ್, ಐಎಎಸ್ ಕಾಲೋನಿ, ಕೆಎಎಸ್ ಕಾಲೋನಿ, ತಿಲಕ್ನಗರ, ಎನ್.ಎಸ್.ಪಾಳ್ಯ ಕೈಗಾರಿಕಾ ಪ್ರದೇಶ. ಜೆಆರ್ಬಿ ಮುಖ್ಯರಸ್ತೆ, ಅನಂತರ ಲೇಔಟ್, ಶಾಂತಿ ಪಾರ್ಕ್, ಬಳೇಕಹಳ್ಳಿ, ಎಸ್ಆರ್ಕೆ ಗಾರ್ಡನ್, ಬಿಎಚ್ಇಎಲ್ ಲೇಔಟ್, ನಿಮ್ಹಾನ್ಸ್, ಜಯದೇವ ಆಸ್ಪತ್ರೆ ಪ್ರದೇಶ, ಕಿದ್ವಾಯಿ ಆಸ್ಪತ್ರೆ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಹಾಗೇ ಬಿಟಿಎಂ 2ನೇ ಹಂತ, ಮೈಕೋ ಲೇಔಟ್, ಎಂಸಿಹೆಚ್ ಲೇಔಟ್, ದಿವ್ಯ ಟವರ್ಸ್, ಬನ್ನೇರಘಟ್ಟ, ಮುಖ್ಯ ರಸ್ತೆ, ಮಂತ್ರಿ ಅಪಾರ್ಟ್ಮೆಂಟ್, ಗುರಪ್ಪನಪಾಳ್ಯ, ಬಿಸ್ಮಿಲ್ಲಾ ನಗರ, ಶಾಂತಿನಿಕೇತನ ಶಾಲೆ, ಕೆಇಬಿ ಕಾಲೋನಿ, ವಿಲ್ಸನ್ ಗಾರ್ಡನ್, ಇಟ್ಟುಮಡು, ಚಿಕ್ಕಲಸಂದ್ರ, ಎರಹಳ್ಳಿ, ಯಲಚೇನಹಳ್ಳಿ, ವೈಶ್ಯ ಬ್ಯಾಂಕ್ ಕಾಲೋನಿಯಲ್ಲೂ ವಿದ್ಯುತ್ ನಿಲುಗಡೆಯಾಗಲಿದೆ.ಈ ಐದು ಗಂಟೆ ಕಾಲ ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಮನವಿ ಮಾಡಿದೆ.

ನೆಲಮಂಗಲ ಗ್ರಾಮಾಂತರ ತಾಲೂಕಿನಲ್ಲಿ ವಿದ್ಯುತ್​ ವ್ಯತ್ಯಯ
ಬೆಂಗಳೂರು ಗ್ರಾಮಾಂತರ: ನೆಲಮಂಗಲ ಗ್ರಾಮಾಂತರ ತಾಲೂಕಿನ ದಾಬಸ್​​ಪೇಟೆಯ ಭಾಗದಲ್ಲಿ ಹತ್ತು ದಿನಗಳ ಕಾಲ ವಿದ್ಯುತ್​ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. 220 ಕೆವಿ ದಾಬಸ್​ಪೇಟೆ ಉಪ ಕೇಂದ್ರದಲ್ಲಿ ಪರಿವರ್ತಕ ತೈಲ ಬದಲಾವಣೆ ಕಾಮಗಾರಿ ನಡೆಯುತ್ತಿದೆ.

ಈ ಹಿನ್ನೆಲೆ ಐಪಿ ಪೂರಕಗಳನ್ನು ಬದಲಾಯಿಸಲಾಗುತ್ತಿದೆ. ಜೂ.13 ರಿಂದ 23ರವರೆಗೆ ವಿದ್ಯುತ್​​ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಬೆಳಿಗ್ಗೆ 5ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಅಡಚಣೆಯಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್​ ತಿಳಿಸಿದ್ದಾರೆ

error: Content is protected !!