ಮಡಿಕೇರಿ: ಈ ಚಿತ್ರವನ್ನು ನೋಡಿದ ಮೇಲೆ ನಿಮಗೆ ಇದಾವುದೋ ಆಮೆ ಮರಿ ಅಥವಾ ಮೊಲದ ಮರಿ ಇರಬಹುದೆಂದು ನಿಮಗೆ ಅನಿಸಿದರೆ ಅದು ತಪ್ಪು ಇನ್ನೂ ಮೊಟ್ಟೆ ಮೊದಲೋ ಅಥವಾ ಕೋಳಿ ಮೊದಲೋ ಎಂಬ ಪ್ರಶ್ನೆಗೆ ಇನ್ನೂ ಉತ್ತರಕ್ಕೆ ತಡಕಾಟ ನಡೆಯುತ್ತಲೇ ಇದೆ. ಹಂತದ್ರಲ್ಲಿ ಇಲ್ಲೊಂದು ಮನೆಯಲ್ಲಿ ಸಾಕಿದ ಕೋಳಿಯು ವಿಚಿತ್ರ ಆಕಾರದ ಮೊಟ್ಟೆಯನ್ನು ಇಟ್ಟು ಮನೆಯವರಿಗೆ ಅಚ್ಚರಿಯನ್ನು ಉಂಟು ಮಾಡಿದೆ.
ಇನ್ನೂ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕಡಂಗ ಗ್ರಾಮದ ಕೋಲೆಯಂಡ ರೇಖಾ ಪ್ರಸನ್ನ ಅವರ ಕೋಳಿಯೊಂದು ವಿಚಿತ್ರ ಮೊಟ್ಟಿಯನ್ನು ಇಟ್ಟಿದೆ. ಇನ್ನೂ ಎಂದಿನಂತೆ ಈ ಕೋಳಿ ಪ್ರತಿನಿತ್ಯ ಮೊಟ್ಟೆ ಇಡುತ್ತಿತ್ತು. ಆದ್ರೆ ಇವತ್ತು ಈ ಕೋಳಿ ಇಟ್ಟ ಮೊಟ್ಟೆಯನ್ನು ನೋಡಿದ ಮನೆಯವರು ಆಶ್ಚರ್ಯ ಗೊಂಡಿದ್ದಾರೆ. ಇನ್ನೂ ಈ ಮೊಟ್ಟೆಯು ಎಂದಿನಂತೆ ಇರದೇ ಅದು ವಿಚಿತ್ರ ಆಕೃತಿಯಲ್ಲಿ ಯಿದೆ ಎಂದು ಗೊತ್ತಾಗಿದೆ. ಇನ್ನೂ ಈ ವಿಚಿತ್ರ ಕೋಳಿ ಮೊಟ್ಟೆಯ ಅಚ್ಚರಿಗೆ ಕಾರಣವಾಯಿತು. ಜೊತೆಗೆ ಕೆಲವೊಮ್ಮೆ ಕೋಳಿಗೆ ಕ್ಯಾಲ್ಸಿಯಂ ಕೊರತೆಯಾದಾಗ ಈ ರೀತಿಯ ಮೊಟ್ಟೆ ಸೃಷ್ಟಿಯಾಗುತ್ತದೆ ಎಂದು ಹೇಳಲಾಗಿದೆ.