ಬೆಂಗಳೂರು: ಈದ್ಗಾ ಮೈದಾನದ ವಿವಾದ ತೀವ್ರಗೊಂಡಿದೆ. ಮಂಗಳವಾರ ಚಾಮರಾಜಪೇಟೆ ಬಂದ್ಗೆ ಬೆಂಬಲ ನೀಡಲು ನಿರಾಕರಿಸಿದ್ದಾರೆ. ಚಾಮರಾಜಪೇಟೆ ಆಟದ ಮೈದಾನ ಮುಸ್ಲಿಮರಿಗೆ ಸೇರಿಲ್ಲ. ಇದು ನಮ್ಮ ಸ್ವತ್ತು ಅಂತ ಸ್ಥಳೀಯರು, ಸಂಘಟನೆಗಳು ಕಿಡಿಕಾರಿವೆ. ಚಾಮರಾಜಪೇಟೆ ಆಟದ ಮೈದಾನ ಉಳಿವಿಗಾಗಿ ಇದೇ 12ಕ್ಕೆ ಅಂದರೆ ಮುಂದಿನ ಮಂಗಳವಾರ ಚಾಮರಾಜಪೇಟೆ ಬಂದ್ಗೆ ಕರೆ ಕೊಟ್ಟಿವೆ. ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯ ತನಕ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ಸಂಪೂರ್ಣ ಸ್ಥಬ್ದಗೊಳ್ಳಲಿದೆ. ಆದರೆ, ಇದಕ್ಕೆ ಸೊಪ್ಪು ಹಾಕದ ಮುಸ್ಲಿಂ ವ್ಯಾಪಾರಿಗಳು, ಬಂದ್ಗೆ ನಮ್ಮ ಬೆಂಬಲವಿಲ್ಲ. ನಮ್ಮ ಅಂಗಡಿಗಳನ್ನು ಯಾವುದೇ ಕಾರಣಕ್ಕೂ ಮುಚ್ಚಲ್ಲ. ಎಂದಿನಂತೆ ವ್ಯಾಪಾರ ಮಾಡ್ತೇವೆ. ಬಂದ್ನಿಂದ ಲಾಸ್ ಆದರೆ ಇವರೇನು ತಂದು ಕೊಡುತ್ತಾರಾ ಅಂತ ಪ್ರಶ್ನೆ ಮಾಡಿದ್ದಾರೆ.
BBMP ಕಮಿಷನರ್ ಇದು ಪಾಲಿಕೆಯ ಸ್ವತ್ತಲ್ಲ ಎಂದಿದ್ದರು. ವಕ್ಫ್ಬೋರ್ಡ್ ಇದು ನಮ್ಮ ಜಾಗ ಎಂದು ವಾದ ಮಾಡಿತ್ತು. ಹೀಗೆ ಗೊಂದಲದಲ್ಲಿದ್ದ, ಕ್ಷೇತ್ರದ ಜನ, ಭಾನುವಾರ ಈದ್ಗಾ ಮೈದಾನ ಸಮೀಪದ ಜಂಗಮ ಮಂಟಪದಲ್ಲಿ ಸಭೆ ನಡೆಸಿ, ಬಂದ್ಗೆ ತೀರ್ಮಾನಿಸಿದ್ದಾರೆ. ಬಂದ್ ದಿನ ಸಿರ್ಸಿ ಸರ್ಕಲ್ನಿಂದ ಈದ್ಗಾ ಮೈದಾನದವರೆಗೆ ಬೃಹತ್ ರ್ಯಾಲಿ ಮಾಡಲಿದ್ದಾರೆ. ಆದರೆ ಇದಕ್ಕೆ ಪೊಲೀಸರು ಅವಕಾಶ ನೀಡುವುದು ಅನುಮಾನ ಎನ್ನಲಾಗುತ್ತಿದೆ.