ಕೂಗು ನಿಮ್ಮದು ಧ್ವನಿ ನಮ್ಮದು

ಮೊದಲ ಮಗುವಿನ ನಿರೀಕ್ಷೆಯಲ್ಲಿ ಆಕ್ಷನ್‌ ಪ್ರಿನ್ಸ್‌ ಧ್ರುವ, ಪ್ರೇರಣಾ ದಂಪತಿ

ಬೆಂಗಳೂರು: ಆಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಪ್ಪ ಆಗ್ತಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಧ್ರುವ ಮತ್ತು ಪ್ರೇರಣಾ ದಂಪತಿ ಈ ಖುಷಿಸುದ್ದಿಯನ್ನು ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಈ ಕುರಿತು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ʼನಾವು ಜೀವನದ ಹೊಸ ಘಟ್ಟಕ್ಕೆ ಕಾಲಿಡುತ್ತಿದ್ದೇವೆ, ಶೀಘ್ರದಲ್ಲಿ ಬರುತ್ತಿರುವ ನಮ್ಮ ಪುಟ್ಟ ಕಂದಮ್ಮನನ್ನು ಆಶೀರ್ವಾದಿಸಿ. ಜೈ ಹನುಮಾನ್’ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ, ಅದ್ಧೂರಿಯಾಗಿ ಫೋಟೋ ಶೂಟ್‌ ಕೂಡ ಮಾಡಿಸಿದ್ದಾರೆ.

ಫೋಟೋ ಶೂಟ್‌ನಲ್ಲಿ ಕಾಫಿ, ನೀಲಿ, ಪಿಂಕ್‌ ಬಣ್ಣದ ಗೌನ್‌ನಲ್ಲಿ ಪ್ರೇರಣಾ ಮಿಂಚಿದ್ರೆ, ಬ್ಲ್ಯಾಕ್ ಸೂಟ್‌, ವೈಟ್ ಆಂಡ್ ವೈಟ್‌ ಲುಕ್‌ನಲ್ಲಿ ಧ್ರುವ ಕಾಣಿಸಿಕೊಂಡಿದ್ದಾರೆ. ಜೀವಿತಾ ಮತ್ತು ಆಧ್ಯಾ ರಾಜ್‌ ಮೇಕಪ್ ಮಾಡಿದ್ದು, ಸಾಕೇತ್‌ ಇವರಿಬ್ಬರ ಫೋಟೋಶೂಟ್‌ ಮಾಡಿದ್ದಾರೆ. ಉಡುಪುಗಳನ್ನು ಚೇತನ್ ಡಿಸೈನ್ ಮಾಡಿದ್ದಾರೆ. ವಿಡಿಯೋವನ್ನು ಕಾಂತಿ ಸ್ಟುಡಿಯೋ ಮತ್ತು ಪ್ರವೀಣ್ ಗೌಡ ಎಡಿಟ್‌ ಮಾಡಿದ್ದಾರೆ.

error: Content is protected !!