ಕೂಗು ನಿಮ್ಮದು ಧ್ವನಿ ನಮ್ಮದು

ಶಾರುಖ್ ಖಾನ್ ಪುತ್ರ ಬಂಧನದ ನಂತರ ಪುತ್ರನ ಜೊತೆ ಎರಡು ನಿಮಿಷಕಾಲ ಮಾತಾಡಿದ ನಟ ಶಾರೂಖ್

ಮುಂಬೈ: ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಪ್ರಕರಣ ಸಂಬಂಧ ಬಾಲಿವುಡ್ ಸೂಪರ್ ಸ್ಟಾರ್ ಶಾರೂಖ್ ಕಾನ್ ಪುತ್ರ ಆರ್ಯನ್ ಅನ್ನು ಈಗಾಗಗಲೇ NCB ಬಂಧಿಸಿದೆ. ಅಧಿಕಾರಿಗಳು ಆರ್ಯನ್ ಅನ್ನು ಬಂಧಿಸಿದ ನಂತರ ನಟ ಶಾರುಖ್ ತನ್ನ ಪುತ್ರನ ಜೊತೆ ಎರಡು ನಿಮಿಷಗಳ ಕಾಲ ಮಾತುಕತೆ ನಡೆಸಿದ್ದು, ಇದೀಗ ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ಪುತ್ರ ಆರ್ಯನ್ ಬಂಧನದ ನಂತರ ಶಾರೂಖ್ ಖಾನ್ ಫೋನ್ ಮೂಲಕ ಎರಡು ನಿಮಿಷಗಳ ಕಾಲ ಮಗನ ಜೊತೆಗೆ ಮಾತುಕತೆ ನಡೆಸಿದ್ದಾರೆ. ಏನು ಮಾತನಾಡಿದ್ದಾರೆ ಎಂಬುದು ಇನ್ನೂ ತಿಳಿದು ಬಂದಿಲ್ಲ. ಆದ್ರೆ ಪ್ರಕರಣ ಸಂಬಂಧ ಪುತ್ರನಿಗೆ ಧೈರ್ಯ ತುಂಬಿರಬಹುದು ಎಂದು ಹೇಳಲಾಗುತ್ತಿದೆ. ಇತ್ತ ನಿನ್ನೆ ರಾತ್ರಿ ಶಾರೂಖ್ ಮನೆಗೆ ಸಲ್ಮಾನ್ ಖಾನ್ ಭೇಟಿ ನೀಡಿ ಮಾತುಕತೆ ನಡೆಸಿದ್ರು. ಆರ್ಯನ್ ಖಾನ್ ಬಂಧನದ ನಂತರ ಕಾನೂನು ಪ್ರಕ್ರಿಯೆಯ ಭಾಗವಾಗಿ NCB ಅಧಿಕಾರಿಗಳು ಶಾರೂಖ್ ಜೊತೆ ದೂರವಾಣಿಯಲ್ಲಿ ಮಾತನಾಡಲು ಆರ್ಯನ್ ಗೆ ಅವಕಾಶ ನೀಡಲಾಗಿದೆ ಎಂಬುದಾಗಿ ಮೂಲಗಳಿಂದ ತಿಳಿದು ಬಂದಿದೆ.

ಇತ್ತ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಆರ್ಯನ್ ಅಧಿಕಾರಿಗಳ ಮುಂದೆ ಅತ್ತಿದ್ದಾನೆ. ಕಳೆದ ೪ ವರ್ಷಗಳಿಂದ ಆರ್ಯನ್ ಡ್ರಗ್ಸ್ ಸೇವನೆ ಮಾಡುತ್ತಾ ಬಂದಿದ್ದಾನೆ ಎಂದು ವಿಚಾರಣೆಯ ವೇಳೆ ಆರ್ಯನ್ ಅಧಿಕಾರಿಗಳ ಮುಂದೆ ಬಾಯ್ಬಿಟ್ಟಿರುವುದಾಗಿ NCB ಮೂಲಗಳಿಂದ ತಿಳಿದು ಬಂದಿದೆ. ಶನಿವಾರ ಮಧ್ಯರಾತ್ರಿ ನಿಖರ ಮಾಹಿತಿ ಆಧರಿಸಿ NCB ಅಧಿಕಾರಿಗಳು ಮಾರುವೇಷದಲ್ಲಿ ಕಾರ್ಯಾಚರಣೆ ನಡೆಸಿದ್ರು.

ಈ ಸಂದರ್ಭದಲ್ಲಿ ಶಾರೂಖ್ ಪುತ್ರ ಸೇರಿ ಒಟ್ಟು ೮ ಜನರನ್ನು ವಶಕ್ಕೆ ಪಡೆದಿದ್ದ NCB ಹೆಚ್ಚಿನ ವಿಚಾರಣೆ ನಡೆಸಿ ಬಂಧಿಸಿತ್ತು. ನಂತರ ಶಾರೂಖ್ ಪುತ್ರ ಮತ್ತು ಇನ್ನಿಬ್ಬರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ಈ ೩ ಜನರನ್ನು ೧ ದಿನಕ್ಕೆ NCB ವಶಕ್ಕೆ ನೀಡಿತ್ತು. ಇವತ್ತು ಆರ್ಯನ್ ಖಾನ್ ಪರ ವಕೀಲರು ಜಾಮೀನಿಗಾಗಿ ಅರ್ಜಿ ಸಲ್ಲಿಸಲಿದ್ದಾರೆ.

error: Content is protected !!