ಕೂಗು ನಿಮ್ಮದು ಧ್ವನಿ ನಮ್ಮದು

CM ಆಗಿ ಎರಡು ವರ್ಷ – ಬಿ.ಎಸ್.ವೈಗೆ: ಸುಧಾಕರ್ ಅಭಿನಂದನೆ

ಬೆಂಗಳೂರು: ಸಿಎಂ ಯಡಿಯೂರಪ್ಪನವರು ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದು ನಾಳೆಗೆ ಬರೋಬರಿ ೨ ವರ್ಷ ಆಗುತ್ತದೆ. ಈ ಹಿನ್ನೆಲೆಯಲ್ಲಿ ಸಚಿವ ಕೆ.ಸುಧಾಕರ್ ಬಿ.ಎಸ್‍ ಯಡಿಯೂರಪ್ಪನವರಿಗೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ.ಇನ್ನೂ ರಾಜ್ಯ ಬಿಜೆಪಿ ಸರ್ಕಾರಕ್ಕೆ ಅದರಲ್ಲೂ ಮಾನ್ಯ ಮುಖ್ಯಮಂತ್ರಿಗಳಿಗೆ ನಾಳೆಯ ದಿನ ಅತ್ಯಂತ ಮುಖ್ಯವಾಗಿರುವಂತದ್ದು, ಜೊತೆಗೆ ಎರಡು ವರ್ಷ ಸರ್ಕಾರವನ್ನು ಅತ್ಯುತ್ತಮವಾಗಿ ನಡೆಸಿಕೊಂಡು ಹೋಗಿದ್ದಾರೆ. ಜೊತೆಗೆ ಈ ಎರಡು ವರ್ಷದಲ್ಲಿ ಅನೇಕ ಅಡೆತಡೆಗಳು ಆದರೂ ಬಿ‌ಎಸ್‍.ವೈ ಅದನ್ನು ಉತ್ತಮವಾಗಿ ನಿಭಾಯಿಸಿದ್ದಾರೆ.ಇನ್ನೂ ಇದೇ ವೇಳೆ ನಾಯಕತ್ವ ಬದಲಾವಣೆ ಕುರಿತು ಪ್ರತಿಕ್ರಿಯಿಸಿದ ಅವರು, ನಾಯಕತ್ವ ಬದಲಾವಣೆ ಬಗ್ಗೆ ಮಾತಾನಾಡುವಷ್ಟು ನಾನು ದೊಡ್ಡವನಲ್ಲ.

ನಾನು ಇನ್ನೂ ಸಣ್ಣವನು, ಆ ಬಗ್ಗೆ ಹಿರಿಯರು ಮಾತಾನಾಡುತ್ತಾರೆ ಎಂದು ಹೇಳಿದ್ದಾರೆ. ಜೊತೆಗೆ ಮುಖ್ಯಮಂತ್ರಿ ಸೂಚನೆಯಂತೆ ನಾನು ನನ್ನ ಕೆಲಸ ಮಾಡ್ತಿದ್ದೀನಿ ಅಂತಾ ಹೇಳಿದ ಸಚಿವರು, ಕೋವಿಡ್ ನಿರ್ವಹಣೆಯಾಗಲಿ, ೨ ಬಾರಿ ನೆರೆ ಸಮಯದಲ್ಲಾಗಲಿ ಮುಖ್ಯಮಂತ್ರಿಯಾಗಿ ಬಿ.ಎಸ್.ವೈ ಉತ್ತಮವಾಗಿ ಕಾರ್ಯ ನಿರ್ವಹಣೆ ಮಾಡಿದ್ರು ಎಂದು ಬಿ.ಎಸ್‍.ವೈ ಅವ್ರಿಗೆ ಅಭಿನಂದನೆಗಳನ್ನು ಸುಧಾಕರ ಸಲ್ಲಿಸಿದ್ದಾರೆ. ಸದ್ಯ ಬೆಳಗಾವಿ ಪ್ರವಾದಲ್ಲಿರುವ ಬಿ.ಎಸ್‍.ವೈ ಮಾತನಾಡಿ, ಇವತ್ತು ಸಾಯಂಕಾಲ ಹೈಕಮಾಂಡ್ ಅವರ ನಿರ್ಧಾರವನ್ನು ಕಳುಹಿಸುತ್ತಾರೆ. ಯಾರು ಮುಂದಿನ ಮುಖ್ಯಮಂತ್ರಿ ಎಂಬುವುದನ್ನು ಆಗ ನೋಡೊನ ಎಂದಿದ್ದಾರೆ. ಜೊತೆಗೆ ಯಾವುದೇ ಸ್ವಾಮಿಜಿಗಳ ಸಭೆ, ಸಮಾವೇಶ ಮಾಡುವ ಅವಶ್ಯಕತೆಯಿಲ್ಲ. ನನಗೆ ಮೋದಿ, ಅಮಿತ್ ಶಾ ಅವರ ಮೇಲೆ ನಂಬಿಕೆಯಿದೆ ಎಂದಿದ್ದಾರೆ.

error: Content is protected !!