ಕೂಗು ನಿಮ್ಮದು ಧ್ವನಿ ನಮ್ಮದು

ವೈದ್ಯನ ನಿರ್ಲಕ್ಷ್ಯದಿಂದ ಸಾವು, ಆಸ್ಪತ್ರೆಯ ಎದುರು ಶವ ಇಟ್ಟು ಪ್ರತಿಭಟನೆ

ಮಂಡ್ಯ: ಖಾಸಗಿ ಕ್ಲಿನಿಕ್ ವೈದ್ಯ ಕೊಟ್ಟ ಇಂಜೆಕ್ಷನ್‍ ನಿಂದ ಯುವಕ ಮೃತಪಟ್ಟಿದ್ದಾನೆ. ಎಂದು ಆರೋಪಿಸಿ ಗ್ರಾಮಸ್ಥರು ಮತ್ತು ಮೃತನ ಪೋಷಕರು ಶವವನ್ನು ಅಂತ್ಯಕ್ರಿಯೆ ಮಾಡದೆ ಮಂಡ್ಯದ ಮಿಮ್ಸ್ ಆಸ್ಪತ್ರೆಯ ಶವಗಾರದ ಮುಂದೆ ಇಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ. ಮಂಡ್ಯ ತಾಲೂಕಿನ ಚಂದಗಾಲು ಗ್ರಾಮದ ವಿಜಯ್ ಕುಮಾರ್ ಎಂಬುವವರ ಮಗ ನಿಶಾಂತ್ ೧೭ ವಯಸ್ಸಿನ ಹುಡುಗ ಸಾವನ್ನಪ್ಪಿದ್ದಾನೆ.

ಕಳೆದ 2 ದಿನಗಳ ಹಿಂದೆ ನಿಶಾಂತ್‍ ಗೆ ಜ್ವರ ಇದ್ದ ಕಾರಣ V.C ಫಾಂ ಗೇಟ್ ಹತ್ತಿರ ಇರುವ ಖಾಸಗಿ ಕ್ಲಿನಿಕ್‍ಗೆ ಹೋದ ವೇಳೆ ವೈದ್ಯ ಸಂತೋಷ್ ಇಂಜೆಕ್ಷನ್ ಕೋಟ್ಟಿದ್ದಾರೆ. ನಂತರ ನಿಶಾಂತ್ ಆರೋಗ್ಯದಲ್ಲಿ ಏರುಪೇರು ಆದ ಕಾರಣ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ಬಳಿಕ ಮೈಸೂರಿಗೆ ಕರೆದುಕೊಂಡು ಹೋಗಿ ಎಂದು ಮಿಮ್ಸ್ ಸಿಬ್ಬಂದಿ ಶಿಫಾರಸ್ಸು ಮಾಡಿದ್ದಾರೆ.

ಮೈಸೂರಿನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದ ಸಂದರ್ಭದಲ್ಲಿ ಚಿಕಿತ್ಸೆ ಫಲಕಾರಿಯಾಗದೇ ನಿಶಾಂತ್ ಮೃತಪಟ್ಟಿದ್ದಾನೆ. ನಿಶಾಂತ್ ಸಾವಿಗೆ V.C ಫಾಂ ಗೇಟ್ ಹತ್ತಿರ ಇರುವ ಖಾಸಗಿ ಕ್ಲಿನಿಕ್‍ ವೈದ್ಯ ಸಂತೋಷ್ ನೀಡಿರುವ ಇಂಜೆಕ್ಷನ್‍ ಎಂದು ಆರೋಪಿಸಿ ಮೃತನ ಕುಟುಂಬಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ. ವೈದ್ಯ ಸಂತೋಷ್‍ರನ್ನು ಬಂಧಿಸಿ, ಮೃತ ಹುಡುಗನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸುತ್ತಿದ್ದಾರೆ. ಈ ಪ್ರಕರಣವು ಶಿವಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

error: Content is protected !!