ನಾಳೆ ಸಿದ್ದರಾಮಯ್ಯ ಎರಡನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಪಡಗ್ರಹಣ ಮಾಡಲಿದ್ದಾರೆ. ಇವರೊಟ್ಟಿಗೆ ಡಿ.ಕೆ. ಶಿವಕುಮಾರ್ ಮೊದಲ ಬಾರಿಗೆ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಈ ನಡುವೆ ಸಚಿವ ಸ್ಥಾನಕ್ಕಾಗಿ ಶಾಸಕರ ನಡುವೆ ಭಾರೀ ಪೈಪೋಟಿ ಏರ್ಪಟ್ಟಿದೆ.
ಖಾತೆಗಳ ಮೇಲೆ ಕಣ್ಣಿಟ್ಟಿರುವ ಹಿರಿಯ ಕೈ ಶಾಸಕರು:
ಕಾಂಗ್ರೆಸ್‌ನಲ್ಲಿ ಸಚಿವ ಸ್ಥಾನಕ್ಕಾಗಿ ಪೈಪೋಟಿ ಹೆಚ್ಚಾಗಿದೆ. ಅದರಲ್ಲೂ ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕರುಗಳು ಪ್ರಮುಖ ಖಾತೆಗಳ ಮೇಲೆ ಕಣ್ಣಿಟ್ಟಿದ್ದು ಖಾತೆಗಳಿಗಾಗಿ ಲಾಬಿ ನಡೆಸಲು ಸಚಿವ ಸ್ಥಾನದ ಆಕಾಂಕ್ಷಿಗಳು ದೆಹಲಿಗೆ ದೌಡಾಯಿಸುತ್ತಿದ್ದಾರೆ. ಇನ್ನು ಕೆಲವು ಆಕಾಂಕ್ಷಿಗಳು ನಿನ್ನೆಯೇ ದೆಹಲಿಗೆ ಪ್ರಯಾಣಿಸಿದ್ದಾರೆ. ಕೃಷ್ಣ ಭೈರೇಗೌಡ, ದಿನೇಶ್ ಗುಂಡೂರಾವ್, ಕೆ.ಹೆಚ್ ಮುನಿಯಪ್ಪ, ಶ್ರೀನಿವಾಸ್ ಮಾನೆ, ಡಾ.ಎಂ.ಸಿ ಸುಧಾಕರ್ ಸೇರಿದಂತೆ ಹಲವರು ಈಗಾಗಲೇ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ.
ಇನ್ನೂ ನೂತನ ಸಚಿವ ಸಂಪುಟ ಆಯ್ಕೆ ಹಿನ್ನಲೆಯಲ್ಲಿ ನಿಯೋಜಿಸ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ವಿಶೇಷ ವಿಮಾನದ ಮೂಲಕ ದೆಹಲಿಗೆ ಪ್ರಯಾಣಿಸುತ್ತಿದ್ದಾರೆ. ಉಭಯ ನಾಯಕರು ಈಗಾಗಲೇ ಸಂಪುಟದಲ್ಲಿ ಯಾರಿಗೆ ಸ್ಥಾನ ನೀಡಬೇಕು ಎಂಬ ಪಟ್ಟಿ ತಯಾರಿಸಿದ್ದು ಈ ಕುರಿತಂತೆ ಹೈಕಮಾಂಡ್ ಜೊತೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ.
ಹೈಕಮಾಂಡ್ ನಾಯಕರ ಜೊತೆಗೆ ಚರ್ಚಿಸಿ ಕ್ಯಾಬಿನೆಟ್ ಫೈನಲ್ ಮಾಡಲಿರುವ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್, ದೆಹಲಿ ನಾಯಕರೊಂದಿಗೆ ಚರ್ಚಿಸಿ 28 ನೂತನ ಸಚಿವರ ಆಯ್ಕೆಯನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ನಾಳೆ ಸಿದ್ದು, ಡಿಕೆಶಿ ಅವರೊಟ್ಟಿಗೆ ಎಲ್ಲಾ ಸಚಿವರು ಕೂಡ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಸಂಪುಟದಲ್ಲಿ ಯಾರಿಗೆ ಲಕ್..?, ಯಾರಿಗೆ ಅನ್‌ಲಕ್..? ಸಿದ್ದು ಬಣಕ್ಕೆ ಎಷ್ಟು..? ಡಿಕೆ ಬಣಕ್ಕೆ ಎಷ್ಟು..? ಇಲ್ಲಿದೆ ಸಂಭಾವ್ಯ ಸಚಿವರ ಪಟ್ಟಿ:
ಸಿದ್ದರಾಮಯ್ಯ ಬಣ:-
*ಕೆಜೆ ಜಾರ್ಜ್
*ಜಮೀರ್ ಅಹ್ಮದ್
*ದಿನೇಶ್ ಗುಂಡೂರಾವ್
*ಎಂಬಿ ಪಾಟೀಲ್
*ಈ ತುಕರಾಂ
*ರಹೀಮ್ ಖಾನ್
*ರಾಘವೇಂದ್ರ ಹಿಟ್ನಾಳ್
*ಎಸ್. ಎಸ್ ಮಲ್ಲಿಕಾರ್ಜುನ
*ಶಿವಲಿಂಗೇಗೌಡ
*ಟಿಬಿ ಜಯಚಂದ್ರ
*ಈಶ್ವರ ಖಂಡ್ರೆ
*ಅಜಯ್ ಸಿಂಗ್
*ಸತೀಶ್ ಜಾರಕಿಹೊಳಿ
*ಕೃಷ್ಣಭೈರೇಗೌಡ
*ವಿನಯ್ ಕುಲಕರ್ಣಿ
*ಯುಟಿ ಖಾದರ್
- ಡಾ ಎಚ್ ಸಿ ಮಹದೇವಪ್ಪ/ ಬಸವರಾಜ ರಾಯರೆಡ್ಡಿ
ಡಿ.ಕೆ ಶಿವಕುಮಾರ್ ಬಣ:-
*ಲಕ್ಷ್ಮೀ ಹೆಬ್ಬಾಳ್ಕರ್
*ತನ್ವೀರ್ ಸೇಠ್
*ಮಧು ಬಂಗಾರಪ್ಪ
*ಕುಣಿಗಲ್ ರಂಗನಾಥ್
*ಬಿ.ಕೆ ಹರಿಪ್ರಸಾದ್
*ಡಾ.ಜಿ ಪರಮೇಶ್ವರ್
*ಕೆ.ಎಚ್ ಮುನಿಯಪ್ಪ
*ಪ್ರಿಯಾಂಕಾ ಖರ್ಗೆ
*ರಾಮಲಿಂಗರೆಡ್ಡಿ
*ಲಕ್ಷ್ಮಣ ಸವದಿ/ಜಗದೀಶ್ ಶೆಟ್ಟರ್