ಬೆಂಗಳೂರು: ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿ ನಿರ್ಮಿಸಿರುವ ಇಂದಿರಾಗಾಂಧಿ ಭವನ ಉದ್ಘಾಟಿಸಿ ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ್ದು ಡಿಕೆ ಶಿವಕುಮಾರ್ರನ್ನು ಹೊಗಳಿದ್ದಾರೆ. ಇಡೀ ದೇಶದಲ್ಲಿ ಈ ರೀತಿಯ ಹೈಟೆಕ್ ಕಚೇರಿ ಕಾಂಗ್ರೆಸ್‌ಗೆ ಇಲ್ಲ. ಡಿಕೆಶಿ ಬಹಳ ಲಕ್ಕಿ ಇದ್ದಾನೆ, ಹೈಟೆಕ್ ಆಗಿ ಕಟ್ಟಡ ನಿರ್ಮಿಸಿದ್ದಾರೆ. ಡಿಕೆಶಿ ಸ್ವಲ್ಪ ಮುಂಗೋಪಿ ಅನ್ನೋದು ಬಿಟ್ರೆ ಒಳ್ಳೆಯ ಕೆಲಸಗಾರ. ಹಿಡಿದ ಕೆಲಸ ಬಿಡದೆ ಡಿ.ಕೆ.ಶಿವಕುಮಾರ್ ಮಾಡಿ ಮುಗಿಸುತ್ತಾನೆ.
ಸಿದ್ದರಾಮಯ್ಯ ಸೇರಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಕೆಲಸ ಮಾಡ್ತಾರೆ. ಹೀಗಾಗಿ ಸೋನಿಯಾ, ರಾಹುಲ್, ಪ್ರಿಯಾಂಕಾಗೆ ಡಿಕೆಶಿ ಇಷ್ಟ. ಕಟ್ಟಡಕ್ಕೆ ಇಂದಿರಾ ಗಾಂಧಿ ಹೆಸರಿಡಲು ನಾನೇ ಹೇಳಿದ್ದೆ. 150 ಸೀಟ್ ಗೆಲ್ಲಬೇಕು ಅಂತಾ ರಾಹುಲ್ ಗಾಂಧಿ ಹೇಳಿದ್ದಾರೆ. ಅವರು ಸುಮ್ಮನೆ ನಂಬರ್‌ಗಳನ್ನ ಹೇಳಲ್ಲ. ನಮ್ಮ ಗ್ಯಾರಂಟಿಗಳ ಮೂಲಕ 150ಕ್ಕೂ ಹೆಚ್ಚು ಸೀಟ್ ಗೆಲ್ಲಬೇಕು. ಅಧಿಕಾರಕ್ಕೆ ಬಂದ ಮೇಲೆ ಗ್ಯಾರಂಟಿಗಳನ್ನ ಜಾರಿಗೆ ತರಬೇಕು. ಈ ಮೂಲಕ ಜನರ ವಿಶ್ವಾಸಗಳಿಸಬೇಕು ಎಂದರು.