ಕೂಗು ನಿಮ್ಮದು ಧ್ವನಿ ನಮ್ಮದು

ಅಣ್ಣ ಮುಖ್ಯಮಂತ್ರಿ ಆಗಿದ್ದರೆ ಇನ್ನೂ ಸಂತೋಷವಾಗುತ್ತಿತ್ತು: ಡಿಕೆ ಶಿವಕುಮಾರ್ ಸಹೋದರಿ

ಬೆಂಗಳೂರು: ಡಿಕೆ ಶಿವಕುಮಾರ್ ಅವರು ಸಾಕಷ್ಟು ಪರಿಶ್ರಮ ಪಟ್ಟಿದ್ದಾರೆ. ಅಣ್ಣ ಮುಖ್ಯಮಂತ್ರಿ ಆಗಲು ಸಾಕಷ್ಟು ಶ್ರಮ ಹಾಕಿದರು. ಆದರೆ ಉಪಮುಖ್ಯಮಂತ್ರಿ ಸ್ಥಾನ ಸಿಕ್ಕಿದೆ. ಅಣ್ಣ ಮುಖ್ಯಮಂತ್ರಿ ಆಗಿದ್ದರೆ ಇನ್ನೂ ಸಂತೋಷವಾಗುತ್ತಿತ್ತು ಈಗಲೂ ಖುಷಿ ಇದೆ. ಸಣ್ಣ ವಯಸ್ಸಿನಿಂದಲೂ ಸಾಕಷ್ಟು ಕಷ್ಟಪಟ್ಟು ಮೇಲೆ ಬಂದಿದ್ದಾರೆ. ಹೋರಾಟದಿಂದಲೇ ಮೇಲೆ ಬಂದಿದ್ದಾರೆ. ಅವರು ಫ್ಯಾಮಿಲಿ ಮತ್ತು ವೈಯಕ್ತಿಕ ಜೀವನಕ್ಕೆ ಸಮಯವನ್ನು ಕೊಟ್ಟಿಲ್ಲ.

ಅವರು ಜೈಲಿಗೆ ಹೋದ ಘಟನೆಯನ್ನು ಮರೆಯಲು ಆಗಲ್ಲ. ಆದರೂ ಛಲ ಬಿಡದೆ ಹೋರಾಟವನ್ನು ಮಾಡಿ ಈ ಹಂತಕ್ಕೆ ಬಂದಿದ್ದಾರೆ ಎಂದು ಡಿಕೆ ಶಿವಕುಮಾರ್ ಬಗ್ಗೆ ಸಹೋದರಿ ಮಂಜುಳಾ ಬಾವುಕರಾಗಿ ಹೇಳಿದ್ದಾರೆ.

error: Content is protected !!