ಕೂಗು ನಿಮ್ಮದು ಧ್ವನಿ ನಮ್ಮದು

ಸಿದ್ದರಾಮಯ್ಯ ಮುಂದಿನ ಸಿಎಂ ವಿಚಾರ- ಡಿಕೆ ಸುರೇಶ್ ಏನ ಅಂದರು ಗೊತ್ತಾ

ಬೆಂಗಳೂರು: ಈಗ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ. ಮೊದಲು ಚುನಾವಣೆ ಎದುರಿಸಲಿ. ಮಾತನಾಡಿದ ಶಾಸಕರೆಲ್ಲ ಅಧಿಕಾರಕ್ಕಾಗಿ ಬಂದವರು. ಕಾಂಗ್ರೆಸ್ ಶಿಸ್ತು ಗೊತ್ತಿದ್ದವರು ಈ ರೀತಿ ಮಾತನಾಡಲ್ಲ. ಮಲಗಿದ್ದವರೆಲ್ಲ ಈಗ ಎದ್ದಿದ್ದಾರೆ ಎಂದು ಸಂಸದ ಡಿ.ಕೆ ಸುರೇಶ್ ಮುಂದಿನ ಸಿಎಂ ನಾನೇ ಎಂಬ ಶಾಸಕರ ವಿರುದ್ಧ ಕಿಡಿಕಾರಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಿರುವ ಶಾಸಕರೆಲ್ಲ ಮುಂದಿನ ಸಿಎಲ್ ಪಿ ಸದಸ್ಯರಲ್ಲ. ಚುನಾವಣೆ ಎದುರಿಸಿ ಇವರು ಶಾಸಕರಾಗಬೇಕು. ಡಿ.ಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರು, ಪಕ್ಷದ ಕೆಲಸ ಮಾಡುತ್ತಿದ್ದಾರೆ. ಸಿಎಲ್ಪಿ ನಾಯಕರಾಗಿ ಸಿದ್ದರಾಮಯ್ಯ ಕೆಲಸ ಮಾಡ್ತಿದ್ದಾರೆ. ಮಧ್ಯೆ ಈ ರೀತಿ ಹೇಳಿಕೆ ನೀಡುವವರಿಗೆ ಇವರಿಗೆ ಏನು ಕೆಲಸ ಎಂದು ವಾಗ್ದಾಳಿ ನಡೆಸಿದ್ದಾರೆ. ಇನ್ನು ರಾಜ್ಯದಲ್ಲಿ ಕಾಂಗ್ರೆಸ್ ಕಟ್ಟುವ ಕೆಲಸ ಮಾಡಲಿ. ಮುಂದಿನ ಚುನಾವಣೆ ಬಳಿಕ ಶಾಸಕಾಂಗ ಪಕ್ಷ ಸಭೆ ನಡೆಯಲಿ. ಈಗ ಮಾತನಾಡುವವರೆಲ್ಲ, ಆ ಸಭೆಗೆ ಬರಲಿ. ನಾವು ಅವರಿಗೆ ಸವಾಲು ಹಾಕುತ್ತೇವೆ. ಶಾಸಕರ ಹೇಳಿಕೆಯಿಂದ ಪಕ್ಷದಲ್ಲಿ ಗೊಂದಲ ಸೃಷ್ಟಿಯಾಗ್ತಿದೆ. ಒಳಗೊಳಗೆ ಇವರು ಉರಿದುಕೊಂಡ್ರೆ ನಾವೇನು ಮಾಡಲು ಸಾಧ್ಯ ಎಂದಿದ್ದಾರೆ.

error: Content is protected !!