ಕೂಗು ನಿಮ್ಮದು ಧ್ವನಿ ನಮ್ಮದು

ನಾಗ ಚೈತನ್ಯ, ಸಮಂತಾ ಡಿವೋರ್ಸ್ಗೆ ಅಸಲಿ ಕಾರಣ ಬಯಲು

ಹೈದರಾಬಾದ್: ಟಾಲಿವುಡ್‍ನ ಕ್ಯೂಟ್ ಕಪಲ್ ಸಮಮಂತಾ, ನಾಗ ಚೈತನ್ಯ ವಿಚ್ಛೇದ ಪಡೆದುಕೊಂಡಿರುವುದು ಗೊತ್ತಿರುವ ವಿಚಾರವಾಗಿದೆ. ಆದ್ರೆ ಇವರ ಮಧ್ಯೆ ಇದ್ದಕ್ಕಿದ್ದ ಹಾಗೇ ಬಿರುಕು ಮೂಡಲು ಕಾರಣವೇನು ಎಂದು ಅಭಿಮಾನಿಗಳು ಕೇಳುತ್ತಿದ್ರು. ಆದ್ರೆ ಜಾಲತಾಣಗಳಲ್ಲಿ ಅವು ಇವು ವಿಚಾರಗಳು ಹರಿದಾಡುತ್ತಿವೆ. ಸಮಂತಾ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಆದರೆ ವಿವಾಹದ ಬಳಿಕ ತೆರೆಕಂಡ ರಂಗಸ್ಥಲಮ್, ಮಜಿಲಿ ಸೇರಿ ಕೆಲವು ಚಿತ್ರಗಳು ಯಶಸ್ಸು ಕಂಡಿವೆ.

ಆದ್ರೆ ನಾಗ ಚೈತನ್ಯ ವೃತ್ತಿ ಜೀವನದಲ್ಲಿ ಸಾಕಷ್ಟು ಸೋಲುಗಳನ್ನು ಕಾಣುತ್ತಿದ್ದಾರೆ. ಅವರ ನಟನೆಯ ಮಜಿಲಿ ಚಿತ್ರ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತು. ಆದ್ರೆ ಅಭಿಮಾನಿಗಳು ಸಿನಿಮಾ ಯಶಸ್ಸನ್ನು ಈ ಚಿತ್ರದಲ್ಲಿ ಮುಖ್ಯಪಾತ್ರ ಮಾಡಿದ ಸಮಂತಾಗೆ ನೀಡಿದ್ರು. ಈ ರೀತಿಯ ಸಾಕಷ್ಟು ಘಟನೆಗಳು ನಡೆದಿವೆ ಎನ್ನಲಾಗುತ್ತಿದೆ. ದಿ ಫ್ಯಾಮಿಲಿ ಮ್ಯಾನ್ ೨ ಯಶಸ್ಸಿನ ಬಳಿಕ ಬಾಲಿವುಡ್ ಮಂದಿ ಸಮಂತಾ ಮನೆ ಬಾಗಿಲು ತಟ್ಟುತ್ತಿದ್ದಾರೆ. ಈ ವಿಚಾರದಲ್ಲಿ ನಾಗ ಚೈತನ್ಯ ಸಾಕಷ್ಟು ಹೊಟ್ಟೆಕಿಚ್ಚು ಮಾಡಿಕೊಳ್ಳುತ್ತಿದ್ರು. ಎಂದು ತಳಿದು ಬಂದಿದೆ.

ನಾಗ ಚೈತನ್ಯಗೆ ಮಕ್ಕಳನ್ನು ಆಡಿಸುವ ಆಸೆ ಇತ್ತು. ಆದ್ರೆ ಸಮಂತಾಗೆ ಇಷ್ಟು ಬೇಗ ಅದು ಇಷ್ಟವಿರಲಿಲ್ಲ ಎಂದು ಕೇಲ ಮೂಲಗಳಿಂದ ತಿಳಿದು ಬಂದಿದೆ. ಮಕ್ಕಳಾದ ಬಳಿಕ ಅದರ ಪಾಲನೆಗೆ ಒಂದಷ್ಟು ವರ್ಷ ಹಿಡಿಯುತ್ತದೆ. ಆ ವೇಳೆಗೆ ಚಿತ್ರರಂಗದಲ್ಲಿ ಬೇಡಿಕೆ ಕುಗ್ಗಿರುತ್ತದೆ. ಈ ಕಾರಣಕ್ಕೆ ಕೆಲ ವರ್ಷ ಬಿಟ್ಟು ಮಗುವನ್ನು ಪಡೆಯುವ ಆಲೋಚನೆ ಸಮಂತಾ ಅವರದ್ದಾಗಿತ್ತು.

ಆದರೆ ಪದೇ ಪದೇ ಇದೆ ವಿಚಾರಕ್ಕೂ ಇವರಿಬ್ಬರ ನಡುವೆ ವಾಗ್ವಾದಗಳು ಏರ್ಪಟ್ಟಿವೆ ಎನ್ನಲಾಗಿದೆ.
ವಿವಾಹ ಆದ ನಂತರದಲ್ಲಿ ಹೀರೋಯಿನ್‍ಗಳು ಬೋಲ್ಡ್ ಆಗಿ ತೆರೆಮೇಲೆ ಕಾಣಿಸಿಕೊಳ್ಳೋದು ತುಂಬಾನೇ ಅಪರೂಪ. ಕುಟುಂಬದ ಹಿರಿಯರೂ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಾರೆ. ಆದ್ರೆ ಸಮಂತಾ ಇದಕ್ಕೆಲ್ಲ ಕೇರ್ ಮಾಡದೇ ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ರು. ಸಮಂತಾ ವೃತ್ತಿ ಜೀವನದ ದೃಷ್ಟಿಯಲ್ಲಿ ದಿ ಫ್ಯಾಮಿಲಿ ಮ್ಯಾನ್ ೨ ಬಹಳ ಮಹತ್ವ ಪಡೆದುಕೊಂಡಿದೆ. ಈ ಕಾರಣಕ್ಕೆ ಅವರು ವೆಬ್ ಸೀರಿಸ್ ಒಪ್ಪಿಕೊಂಡಿದ್ರು. ಇದಕ್ಕೆ ಕುಟುಂಬದವರ ವಿರೋಧವಿದ್ರು ಸಮಂತಾ ತಲೆಕೆಡಿಸಿಕೊಂಡಿಲ್ಲ ಎನ್ನಲಾಗುತ್ತಿದೆ. ಈ ವಿಚಾರವೇ ಈಗ ಡಿವೋರ್ಸ್ ವರೆಗೆ ತಂದು ನಿಲ್ಲಿಸಿತು ಎಂದು ಮೂಲಗಳಿಂದ ತಿಳಿದು ಬಂದಿದೆ.

ಸಮಂತಾ, ನಾಗ ಚೈತನ್ಯ ದಾಂಪತ್ಯ ಮುರಿದು ಬಿದ್ದಿದೆ. ಇದಕ್ಕೆ ಕಾರಣಗಳೇನು ಎನ್ನುವ ಬಗ್ಗೆ ಸಾಕಷ್ಟು ಜನರು ಸಾಕಷ್ಟು ರೀತಿಯಲ್ಲಿ ಚರ್ಚಿಸುತ್ತಿದ್ದಾರೆ. ಈಗ ಈ ಜೋಡಿ ಬೇರೆಯಾಗಿದೆ. ಈ ಇಬ್ಬರ ವೃತ್ತಿ ಜೀವನದಲ್ಲಿ ಉತ್ತಮ ಯಶಸ್ಸನ್ನು ಕಾಣಲಿ ಎನ್ನುವುದು ಅಭಿಮಾನಿಗಳ ಆಶಯವಾಗಿದೆ.

error: Content is protected !!