ಬೆಳಗಾವಿ: ಬೆಳಗಾವಿ ಜಿಲ್ಲಾಸ್ಪತ್ರೆಯ ರೋಗಿಗಳಿಗೆ ಲಕ್ಷ್ಮೀ ತಾಯಿ ಫೌಂಡೇಷನ್ ವತಿಯಿಂದ ಆಹಾರದ ಪ್ಯಾಕೇಟ್ ಹಾಗೂ ನೀರಿನ ಬಾಟಲ್ ಗಳನ್ನು ವಿತರಿಸಲಾಯಿತು.
ಕೊರೋನಾ ಸಾಂಕ್ರಾಮಿಕ ರೋಗದ ಈ ಸಂದರ್ಭದಲ್ಲಿ ಲಕ್ಷ್ಮೀ ತಾಯಿ ಫೌಂಡೇಷನ್ ಮೂಲಕ ಈಗಾಗಲೆ 2 ಅಂಬುಲೆನ್ಸ್ ಸೇವೆಯನ್ನು ವ್ಯವಸ್ಥೆ ಮಾಡಿರುವ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಇದೀಗ, ಸಾಮಾಜಿಕ ಕಳಕಳಿಯ ದೃಷ್ಟಿಯಿಂದ ಆಹಾರದ ಪ್ಯಾಕೇಟ್, ನೀರಿನ ಬಾಟಲ್ ಗಳು, ಮಾತ್ರೆಯ ಕಿಟ್ ಗಳು, ಮಾಸ್ಕ್ ಹಾಗೂ ಇನ್ನಿತರ ವಸ್ತುಗಳನ್ನು ವಿತರಿಸುವ ಕೆಲಸ ಮಾಡಿದ್ದಾರೆ.
ಕೊರೋನಾ ಮಹಾಮಾರಿಯಿಂದ ತತ್ತರಿಸಿದ ಜನರಿಗೆ ಎಲ್ಲರೂ ಕೈಲಾದಷ್ಟೂ ಸಹಾಯವನ್ನು ಮಾಡಬೇಕು. ಎಲ್ಲರೂ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಸ್ಯಾನಿಟೈಜರ್, ಹ್ಯಾಂಡ್ ಗ್ಲೋವ್ಸ್, ಮಾಸ್ಕ್ ಮುಂತಾದ ಸುರಕ್ಷಿತ ವಸ್ತುಗಳನ್ನು ಬಳಿಸುವ ಮೂಲಕ ಕೊರೋನಾ ರೋಗವನ್ನು ಹೊಡೆದೋಡಿಸಬೇಕು.
ಅನಗತ್ಯವಾಗಿ ಮನೆಯಿಂದ ಹೊರಗೆ ಬಾರದಿರುವ ಮೂಲಕ ನಿಮ್ಮ ಹಾಗೂ ನಿಮ್ಮ ಮನೆಯವರ ಸುರಕ್ಷತೆಯನ್ನು ಕಾಪಾಡಿ ಎಂದು ಲಕ್ಷ್ಮಿ ಹೆಬ್ಬಾಳಕರ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.