ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಅಬ್ಬರ ಕಡಿಮೆ ಆಗುತ್ತಿದ್ದಂತೆಯೇ ಅನ್‌ಲಾಕ್ ಪ್ರಕ್ರಿಯೆ ಜಾರಿ ಮಾಡಲಾಗಿದೆ. ಅದ್ರೆ ಅನ್ ಲಾಕ್ ಬೆನ್ನಲ್ಲೇ ಡೆಲ್ಟಾ ಫ್ಲಸ್ ಆರ್ಭಟ ಹೆಚ್ಚಾಗಿದ್ದು, ಕಟ್ಟುನಿಟ್ಟಿನ ನಿರ್ಬಂಧ ಹೇರುವಂತೆ ಕೇಂದ್ರ ಸರಕಾರ ಸೂಚನೆಯನ್ನು ಕೊಟ್ಟಿದೆ.
ಮಹಾರಾಷ್ಟ್ರ, ಕರ್ನಾಟಕ, ಕೇರಳದಲ್ಲಿ ಡೆಲ್ಟಾ ಪ್ಲಸ್ ವೈರಸ್ ಕಾಣಿಸಿಕೊಂಡಿದ್ದು, ದಕ್ಷಿಣ ಭಾರತದಾದ್ಯಂತ ವ್ಯಾಪಿಸೋ ಆತಂಕವಿದೆ ಅದ್ರಲ್ಲೂ ಮೈಸೂರಿನಲ್ಲಿ ಡೆಲ್ಟಾ ಪ್ಲಸ್ ವೈರಸ್ ಕಾಣಿಸಿಕೊಂಡ ಬೆನ್ನಲ್ಲೇ ಕೇಂದ್ರ ಸರಕಾರದ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್ ಅವರಿಗೆ ಬರೆದಿರುವ ಪತ್ರದಲ್ಲಿ, ಡೆಲ್ಲಾ ಪ್ಲಸ್ ವೈರಸ್ ಪತ್ತೆ ಯಾಗುತ್ತಿರುವ ಕಾರಣ ಕಂಟೈನ್ಮೆಂಟ್ ಝೋನ್ ನಿರ್ಬಂಧ ಜಾರಿಗೆ ತರಲು ಸೂಚಿಸಿದ್ದಾರೆ.
ಡೆಲ್ಟಾ ಪ್ಲಸ್ ವೇರಿಯೆಂಟ್ ಅತೀ ವೇಗದಲ್ಲಿ ಹರಡುತ್ತಿದೆ. ಅಷ್ಟೇ ವೇಗದಲ್ಲಿ ಶ್ವಾಸಕೋಶಕ್ಕೆ ಅವರಿಸಿಕೊಳ್ಳುತ್ತಿದೆ. ಕೊರೋನಾ ವೈರಸ್ ಪೈಕಿ ಡೆಲ್ಟಾ ಪ್ಲಸ್ ಅತ್ಯಂತ ಅಪಾಯ ಕಾರಿ ಅನ್ನೋದು ಈಗಾಗಲೇ ಸಾಬೀತಾಗಿದೆ. ಹೀಗಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯಕ್ಕೆ ಪತ್ರದಲ್ಲಿ ಸೂಚಿಸಲಾಗಿದೆ.
ಅಷ್ಟೇ ಅಲ್ಲಾ ಡೆಲ್ಟಾ ಪ್ಲಸ್ ಹಾಗೂ ಕೊರೋನಾ ಸಂಖ್ಯೆ ಹೆಚ್ಚುತ್ತಿರುವ ಜಿಲ್ಲೆಗಳಲ್ಲಿ ಹೆಚ್ಚಿನ ಪರೀಕ್ಷೆ ಗಳನ್ನು ಮಾಡಿ ಕಂಟೈನ್ಮೆಂಟ್ ಝೋನ್ ನಿರ್ಬಂಧ ಹೇರಲು ಸೂಚನೆ ನೀಡಲಾಗಿದೆ. ಜಿಲ್ಲೆಗಳಲ್ಲಿ ಜನಸಂದಣಿ ಹೆಚ್ಚಾಗುತ್ತಿದೆ. ಮಾರುಕಟ್ಟೆ, ಸಭೆ ಸಮಾರಂಭಗಳು ಮಿತಿಗಿಂತ ಹೆಚ್ಚಿನ ಜನ ಸೇರುತ್ತಿದ್ದಾರೆ. ಕೊರೋನಾ ಮಾರ್ಗಸೂಚಿ ಪಾಲಿಸುತ್ತಿಲ್ಲ. ಹೀಗಾಗಿ ತಕ್ಷಣವೇ ಕಂಟೈನ್ಮೆಂಟ್ ಝೋನ್ ಜಾರಿಗೆ ತನ್ನಿ ಎಂದು ತಿಳಿಸಿದ್ದಾರೆ.