ಬೆಂಗಳೂರು ಗ್ರಾಮಾಂತರ: ಲವ್ ಮಾಡುವಂತೆ ಶಿಕ್ಷಕಿಯ ಮಗನಿಂದ ಕಿರುಕುಳ ಆರೋಪ ಮಾಡಿದ್ದು, ಕಿರುಕುಳದಿಂದ ಮನನೊಂದು SSLC ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಜಿಲ್ಲೆಯ ಹೊಸಕೋಟೆಯ ಪಾರ್ವತಿಪುರದಲ್ಲಿ ನಡೆದಿದೆ. ಸಾರಾ(16) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಮಗಳ ಸಾವಿಗೆ ಶಿಕ್ಷಕಿ ಹಾಗೂ ಇತರರು ಕಾರಣ ಅಂತ ಹೊಸಕೋಟೆ ಠಾಣೆಗೆ ಮೃತ ವಿದ್ಯಾರ್ಥಿನಿ ಪೋಷಕರಿಂದ ದೂರು ನೀಡಲಾಗಿದೆ. ಶಿಕ್ಷಕಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪೊಲೀಸರಿಂದ ತನಿಖೆ ನಡೆಸಲಾಗುತ್ತಿದೆ.
ಹೊಸಕೋಟೆಯ ಖಾಸಗಿ ಶಾಲೆಯಲ್ಲಿ ಮೃತ ಸಾರಾ ಓದುತ್ತಿದ್ದಳು. ಲವ್ ಮಾಡಲು ಒಪ್ಪದ ಕಾರಣ ಶಿಕ್ಷಕಿಯ ಮಗನಿಂದ ಲವ್ ಮಾಡುವಂತೆ ಕಿರುಕುಳ ನೀಡಲಾಗಿದೆ. ಬಾಲಕಿ ಸಾವಿನ ನಂತರ ವಿಚಾರ ಎಲ್ಲೂ ಬಾಯ್ಬಿಡದಂತೆ ಮೃತ ವಿದ್ಯಾರ್ಥಿನಿ ಸ್ನೇಹಿತರಿಗೆ ಶಿಕ್ಷಕಿಯಿಂದ ಧಮ್ಕಿ ಆರೋಪ ಮಾಡಲಾಗಿದೆ.
ಬಾಲಕಿ ಮೃತಪಟ್ಟು ವಾರದ ನಂತರ ಮೃತ ಸಾರಾ ಪೋಷಕರಿಗೆ ಸಹಪಾಠಿಗಳು ವಿಷಯ ತಿಳಿಸಿದ್ದಾರೆ. ಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ಪೋಷಕರು ಒತ್ತಾಯಿಸಿದ್ದಾರೆ.