ಕೂಗು ನಿಮ್ಮದು ಧ್ವನಿ ನಮ್ಮದು

ರಾಯಚೂರು: ಕುಡಿಯುವ ನೀರಿಗಾಗಿ ನದಿಗೆ ಇಳಿದಿದ್ದ ಬಾಲಕನನ್ನ ಹೊತ್ತೊಯ್ದ ಮೊಸಳೆ

ರಾಯಚೂರು: ಕುಡಿಯುವ ನೀರಿಗಾಗಿ ನದಿಗೆ ಇಳಿದಿದ್ದ ಬಾಲಕನನ್ನ ಮೊಸಳೆ ಹೊತ್ತೊಯ್ದ ಘಟನೆ ತಾಲೂಕಿನ ಕುರವಕಲಾ ಗ್ರಾಮದಲ್ಲಿ ನಡೆದಿದೆ. ನವೀನ್(9) ಮೃತ ಬಾಲಕ. ಪೋಷಕರ ಜತೆ ನದಿ ಬಳಿ ಇರುವ ಜಮೀನಿಗೆ ನವೀನ್ ತೆರಳಿದ್ದ. ಈ ವೇಳೆ ಪೋಷಕರು ನದಿಗೆ ಹೋಗಿ ಕುಡಿಯಲು ನೀರು ತರಲು ಹೇಳಿದ್ದರು. ಕುಡಿಯುವ ನೀರಿಗಾಗಿ ನದಿಗೆ ತೆರಳಿದ್ದ ನವೀನ್ ಹಾಗೂ ಮತ್ತೊಬ್ಬ ಬಾಲಕ, ಬಾಟಲಿಗೆ ನೀರು ತುಂಬಿಸಲು ಮುಂದಾಗಿದ್ದಾರೆ.

ಇದೇ ಸಂದರ್ಭದಲ್ಲಿ ನವೀನನ ಮೇಲೆ ಮೊಸಳೆ ದಾಳಿ ಮಾಡಿದ್ದು, ಹೊತ್ತೊಯ್ದಿದೆ. ನವೀನ್ ಜತೆ ಇದ್ದ ಮತ್ತೊಬ್ಬ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇನ್ನು ಬಾಲಕ ನವೀನ್ಗಾಗಿ ಕೃಷ್ಣಾ ನದಿಯಲ್ಲಿ ಶೋಧ ಕಾರ್ಯ ಆರಂಭವಾಗಿದ್ದು, ಯಾಪಲದಿನ್ನಿ ಪೊಲೀಸರು, ಅಗ್ನಿಶಾಮಕ ದಳ ಜೊತೆ ಸ್ಥಳೀಯರಿಂದ ಕಾರ್ಯಾಚರಣೆ. ನಡೆಸಿದ್ದಾರೆ. ಈ ಕುರಿತು ಯಾಪಲದಿನ್ನಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

error: Content is protected !!