ಕೂಗು ನಿಮ್ಮದು ಧ್ವನಿ ನಮ್ಮದು

ಅಥಣಿ ಕೃಷ್ಣಾ ನದಿಯಲ್ಲಿ ಜಲಸಮಾಧಿ ಆಗಿದ್ದ ನಾಲ್ಕು ಜನರ ಶವ ಪತ್ತೆ ! ಗ್ರಾಮದಲ್ಲಿ ಮಡು ಗಟ್ಟಿದ ಸೂತಕದ ಛಾಯೆ

ಬೆಳಗಾವಿ: ಜಿಲ್ಲೆಯ ಅಥಣಿ ತಾಲೂಕಿನ ಹಲ್ಯಾಳ ಗ್ರಾಮದಲ್ಲಿ ಬಟ್ಟೆ ತೊಳೆಯಲು ಹೋದ ಸಮಯದಲ್ಲಿ ಕೃಷ್ಣಾ ನದಿಯಲ್ಲಿ ನೀರು ಪಾಲ ಆಗಿದ್ದ ನಾಲ್ವರ ಶವಗಳು ಪತ್ತೆಯಾಗಿವೆ. ಸತತ ಕಾರ್ಯಾಚರಣೆ ನಡೆಸಿದ ಎನ್ ಡಿಆರ್ ಎಪ್, ಕೆಡಿಆರ್ ಎಪ್, ಅಗ್ನಿಶಾಮಕ ಜಂಟಿಕಾರ್ಯಾಚರಣೆ ನಡೆಸಿ ಶವಗಳನ್ನು ಪತ್ತೆ ಮಾಡಿದ್ದಾರೆ.

ನಿನ್ನೆ ಅಷ್ಟೇ ಓರ್ವನ ಶವ ಪತ್ತೆ ಮಾಡಿ ಕಾರ್ಯಾಚರಣೆ ನಡೆಸುತ್ತಿದ್ದ ತಂಡ ಇಂದು ಉಳಿದ ಮೂವರು ಜನರ ಶವ ಪತ್ತೆ ಹಚ್ಚಿದ್ದಾರೆ. ಈ ಒಂದು ಘಟನೆ ಬಟ್ಟೆ ತೊಳೆಯುವ ವೇಳೆ ಕಾಲು ಜಾರಿದ ಓರ್ವನ ರಕ್ಷಣೆ ವೇಳೆ ನಡೆದಿದ್ದ ದುರಂತದಲ್ಲಿ ನಾಲ್ಕು ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಒಂದೇ ಕುಟುಂಬದ ನಾಲ್ಕು ಜನ ಸಹೋದರರು ನೀರುಪಾಲಾಗಿರುವುದರಿಂದ ಇಡೀ ಗ್ರಾಮದಲ್ಲಿ‌ನೀರವ ಮೌನ ಆವರಿಸಿಕೊಂಡಿದೆ. ಕುಟುಂಬದವರ ಆಕ್ರಂದನ ಮುಗಿಲು‌ ಮುಟ್ಟಿದೆ. ಇಡೀ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿಕೊಂಡಿದೆ.

ನಿನ್ನೆ ಪತ್ತೆಯಾಗಿದ್ದ ಪರಸಪ್ಪ ಬನಸೋಡೆ ಶವ, ಇಂದು ಸದಾಶಿವ ಬನಸೋಡೆ, ಶಂಕರ ಬನಸೋಡೆ, ಧರೆಪ್ಪ ಬನಸೋಡೆ ಶವಗಳು ಪತ್ತೆಯಾಗಿವೆ. ಈ ಸಂಬಂಧ ಅಥಣಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!