ಕೂಗು ನಿಮ್ಮದು ಧ್ವನಿ ನಮ್ಮದು

ಶಾಂಪಿಗ್ ಕರೆದುಕೊಂಡು ಹೋಗಿಲ್ಲ ಅಂತಾ 11 ವರ್ಷದ ಬಾಲಕಿ ಆತ್ಮಹತ್ಯೆ

ಬೆಂಗಳೂರು: ಶಾಪಿಂಗ್ ಗೆ ಕರೆದುಕೊಂಡು ಹೋಗದಿದ್ದಕ್ಕೆ ಮುನಿಸಿಕೊಂಡು ಐದನೇ ತರಗತಿಯ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಎಂಬ ಆಘಾತಕಾರಿ ಸುದ್ದಿ ಹೊರಬಿದ್ದಿದೆ.  11 ವರ್ಷದ ಬಾಲಕಿ ವೈಶಾಲಿ ಆತ್ಮಹತ್ಯೆ ಮಾಡಿಕೊಂಡಿರುವ ಬಾಲಕಿ, ಚಾಮರಾಜಪೇಟೆಯಲ್ಲಿ  ಈ ಘಟನೆ ಸಂಭವಿಸಿದ್ದು, ಹಬ್ಬದ ಹಿನ್ನೆಲೆಯಲ್ಲಿ ಬಟ್ಟೆ ಖರೆದಿಗೆ ಪೋಷಕರು ಮುಂದಾಗಿದ್ದರು.

ಕಳೆದ ಕೆಲವು ದಿನಗಳ ಹಿಂದೆ ಬಾಲಕಿಗೆ  ಬಟ್ಟೆ ಕೊಡಿಸಿದ್ದರು. ಹೀಗಾಗಿ ಆಕೆಯನ್ನು ಬಿಟ್ಟು ಉಳಿದವರಿಗೆ ಬಟ್ಟೆ ಕೊಡಿಸಲು ಪೋಷಕರು ಮುಂದಾಗಿದ್ದಾರೆ. ಅದರಂತೆ ಶನಿವಾರ ಸಂಜೆ ಆಕೆಯನ್ನು ಬಿಟ್ಟು ಇನ್ನಿಬ್ಬರ ಮಕ್ಕಳಿಗೆ ಬಟ್ಟೆ ಖಿರದಿಗೆ ಹೋಗಿದ್ದಾರೆ. ಆಗ ಯಾರು ಮನೆಯಲ್ಲಿ  ಇಲ್ಲದ ವೇಳೆ ನೋಡಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನಲಾಗಿದೆ.

error: Content is protected !!