ಕೂಗು ನಿಮ್ಮದು ಧ್ವನಿ ನಮ್ಮದು

ಇಮ್ರಾನ ಪಠಾಣ ನಿಧನಕ್ಕೆ ಹುಕ್ಕೇರಿ ಶ್ರೀ ಶೊಕ

ಬೆಳಗಾವಿ- ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ನಿಗಮದ ಅಧ್ಯಕ್ಷರಾದ ಮುಕ್ತಾರ ಹುಸೇನ ಪಟಾನವರ ಸುಪುತ್ರಾ ಇಮ್ರಾನ ಪಠಾಣ ಅವರ ನಿಧನಕ್ಕೆ ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಸಂತಾಪವನ್ನು ವ್ಯಕ್ತಪಡಿಸಿ, ಇಮ್ರಾನ ಪಠಾಣ ಅವರು ವಿದೇಶದಲ್ಲಿಯೂ ಕೂಡ ಕೆಲಸವನ್ನು ಮಾಡಿ ಮತ್ತೆ ಸ್ವದೇಶಕ್ಕೆ ಮರಳಿ KAS, IAS ಮಕ್ಕಳಿಗೂ ಕೂಡ ತರಬೇತಿಯನ್ನು ನೀಡುತ್ತಿದ್ದರು. ಇಮ್ರಾನ ಪಠಾಣ ಅವರು ಇವತ್ತು ವಿಧಿವಶ ವಾಗಿರುವುದು ದುಃಖಕರ ಸಂಗತಿ ಇವರ ಆತ್ಮಕ್ಕೆ ಭಗವಂತ ಚಿರಶಾಂತಿಯನ್ನು ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

error: Content is protected !!