ಕೂಗು ನಿಮ್ಮದು ಧ್ವನಿ ನಮ್ಮದು

ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹೆಸರು ಬದಲಾವಣೆ!
ಇಂದಿನಿಂದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಅಂತ ಬದಲಾವಣೆ: ಡಿಸಿಎಂ ಸವದಿ ಹೇಳಿಕೆ

ಕಲಬುರ್ಗಿ: ಇಂದಿನಿಂದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹೆಸರು ಬದಲಾವಣೆ ಮಾಡಲಾಗಿದ್ದು, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಅಂತ ಬದಲಾವಣೆ ಮಾಡಲಾಗಿದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.

ಇನ್ನು ತಮ್ಮ ಪುತ್ರನ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ಅಪಘಾತ ವಾಗಿದ್ದು ಸತ್ಯ, ನಮ್ಮ ಕಾರ್ ಇದ್ದದ್ದು ಸತ್ಯ
ಅಪಘಾತದಲ್ಲಿ ವ್ಯಕ್ತಿಯೋರ್ವ
ನಿಧನರಾಗಿದ್ದು ವಿಷಾಧನೀಯ ಎಂದು ಹೇಳಿದ ಸವದಿ, ಚಿದಾನಂದ ಸವದಿ ಮುಂದಿನ ಪಾರ್ಚೂನ್ ಕಾರ್ ನಲ್ಲಿದ್ದರು ಹಿಂದಿನ ಕಾರ್ ಅಪಘಾತವಾಗಿದ್ದು
ಎಪ್ ಐ ಆರ್ ಆಗಿದೆ, ತನಿಖೆ ನಡೆಯುತ್ತಿದೆ
ಚಿದಾನಂದ ಮೇಲೆ ಎಫ್ ಐ ಆರ್ ದಾಖಲಿಸೋ ಪ್ರಶ್ನೆ ಉದ್ಭವಿಸೋದಿಲ್ಲಾ, ಅವರು ಅಪಘಾತವಾದ ಕಾರ್ ನಲ್ಲಿ ಇರಲಿಲ್ಲ ರಾಜಕೀಯ ದುರುದ್ದೇಶದಿಂದ ಆರೋಪ ಮಾಡಲಾಗುತ್ತಿದೆ ಎಂದರು, ಇನ್ನು
ಚಿದಾನಂದ್ ಹೆಸರು ಎಪ್ ಐ ಆರ್ ನಲ್ಲಿ ಕೈ ಬಿಡಲಾಗಿದೆ ಅಂತ ಆರೋಪಿಸುತ್ತಿದ್ದಾರೆ
ಎರಡು ದಿನದಲ್ಲಿ ಇದರ ಹಿಂದೆ ಯಾರಿದ್ದಾರೆ ಅನ್ನೋದನ್ನು ಬಹಿರಂಗ ಮಾಡ್ತೇನೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.

error: Content is protected !!