ಕೂಗು ನಿಮ್ಮದು ಧ್ವನಿ ನಮ್ಮದು

ಬಿಜೆಪಿಯಲ್ಲಿ ಗುಂಪು ಮಾಡಿಕೊಂಡವರಿಗೆ ಮನ್ನಣೆ ಇಲ್ಲ-ಅಶ್ವತ್ಥ್ ನಾರಾಯಣ್

ಬೆಂಗಳೂರು: ನಮ್ಮ ಪಕ್ಷದಲ್ಲಿರುವವರೆಲ್ಲ ಬಿಜೆಪಿಯವರೇ. ಇಲ್ಲಿ ಯಾವುದೇ ಬಣಗಳಿಗೆ ಅವಕಾಶ ಇಲ್ಲ. ನಮ್ಮಲ್ಲಿ ಬಿಜೆಪಿ ಬಣ ಬಿಟ್ಟರೆ ಯಾರ ಬಣವೂ ಇಲ್ಲ. ಗುಂಪು ಮಾಡಿಕೊಂಡ್ರೂ ಯಾವುದಕ್ಕೂ ಮನ್ನಣೆಯಿಲ್ಲ ಎಂದು ಡಿಸಿಎಂ ಅಶ್ವತ್ಥ್ ನಾರಾಯಣ್ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆ ಅರುಣ್ ಸಿಂಗ್ ಅವರು ಸರ್ಕಾರದ ನೀತಿ, ಸುಧಾರಣೆ ಬಗ್ಗೆ ಚರ್ಚಿಸಬಹುದು. ಆಡಳಿತ ಸುಧಾರಣೆಯ ಬಗ್ಗೆ ಸಲಹೆ ಸೂಚನೆ ಕೊಡಲಿದ್ದಾರೆ. ಎಲ್ಲರ ಜೊತೆಗೆ ಮೀಟಿಂಗ್ ಮಾಡ್ತಾರೆ. ಅವರ ಭೇಟಿಯಲ್ಲೇನೂ ಇದರಲ್ಲೇನೂ ವಿಶೇಷವಿಲ್ಲ ಎಂದು ಹೇಳಿದ್ದಾರೆ. ರಾಜೀವ ಗಾಂಧಿ ಹಂಗಾಮಿ ಉಪ ಕುಲಪತಿ ನೇಮಕ ವಿಚಾರವಾಗಿ ಮಾತನಾಡಿದ ಅವರು, ಇದಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ಇದು ರಾಜ್ಯಪಾಲರಿಂದ ಆದ ನೇಮಕ. ಕಾನೂನು ಚೌಕಟ್ಟು ಬಿಟ್ಟು ಯಾರೂ ಏನು ಮಾಡಲು ಆಗಲ್ಲ. ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಎಲ್ಲವೂ ಕೂಡ ಪಾರದರ್ಶಕವಾಗಿ ನಡೆಯುತ್ತದೆ. ಇಲ್ಲಿ ಯಾವುದೇ ವೈಯಕ್ತಿಕ ವಿಚಾರ ಬರುವುದಿಲ್ಲ ಕಾನೂನು ಪ್ರಕಾರವೇ ಎಲ್ಲ ನಡೆಯುತ್ತದೆ ಎಂದರು.

error: Content is protected !!