ದಾವಣಗೆರೆ: ಬೆಣ್ಣೆ ನಗರಿ ದಾವಣಗೆರೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಇಬ್ಬರು ಯುವಕರಿಗೆ ಚಾಕು ಇರಿಯಲಾಗಿದೆ. ದಾವಣಗೆರೆ ನಗರದ ಬೇತೂರು ರಸ್ತೆಯಲ್ಲಿ ಈ ಘಟನೆ ನಡೆದಿದೆ. ಇನ್ನು ಸೈಯದ್ (26) ಹಾಗೂ ತಾಹೀರ್ (25) ಚಾಕು ಇರಿತಕ್ಕೆ ಒಳಗಾದ ಯುವಕರು. ಇನ್ನು ಈ ಚೂರಿ ಇರಿತಕ್ಕೆ ಕಾರಣ ಹುಡುಕಿ ಹೊರಟರೇ, ಆಟೋ ನಿಲ್ಲಿಸುವ ವಿಚಾರದಲ್ಲಿ ಗಲಾಟೆ ನಡೆದಿದೆ ಎನ್ನಲಾಗಿದ್ದು, ಮೈಲಾರಿ, ಮಂಜು, ಸತೀಶ್, ಪವನ್ ಸೇರಿದಂತೆ 18 ಜನರಿಂದ ಈ ಹಲ್ಲೆ ನಡೆದಿದೆ ಎನ್ನಲಾಗಿದೆ.
ಚಾಕು ಇರಿತಕ್ಕೆ ಒಳಗಾದ ಯುವಕರನ್ನು ಬಾಪೂಜಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಇನ್ನು ಘಟನೆಯ ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆಯ ಮುಂಭಾಗದಲ್ಲಿ ಗಾಯಾಳು ಯುವಕರ ಸಂಬಂಧಿಕರು ಜಮಾಯಿಸಿದ್ದು ಸ್ಥಳದಲ್ಲಿ ವಾತಾವರಣ ಬಿಗುವಿನಿಂದ ಕೂಡಿತ್ತು. ಸಧ್ಯ ಘಟನೆ ಸಂಬಂಧ ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.