ಕೂಗು ನಿಮ್ಮದು ಧ್ವನಿ ನಮ್ಮದು

ನಟ ದರ್ಶನ್ ಹೊಟೇಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಮೇಘಾ ಟಿಸ್ಟ್

ಮೈಸೂರು: ನಟ ದರ್ಶನ್ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇಂದು ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದು, ಮಹತ್ವದ ದಾಖಲೆಗಳನ್ನು ಕಲೆ ಹಾಕಿದ್ದಾರೆ. ಆದ್ರೆ ಹಲ್ಲೆಗೆ ಒಳಗಾದ ವ್ಯಕ್ತಿಯ ದರ್ಶನ್ ನನಗೆ ಹೊಡೆದಿಲ್ಲ ಅಂತ ಹೇಳಿಕೆ ನೀಡಿದ್ದಾರೆ.

ನಟ ದರ್ಶನ್ ಮೈಸೂರಿನ ಸಂದೇಶ್ ದಿ ಪ್ರಿನ್ಸ್ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ ಅಂತ ನಿನ್ನೆ ನಿರ್ದೇಶಕ ಇಂದ್ರಜಿತ್ ಆರೋಪ ಮಾಡಿದ್ದರು. ಈ ಸಂಬಂಧ ಗೃಹ ಸಚಿವರಿಗೆ ದೂರನ್ನೂ ನೀಡಿದ್ದರು. ಇಂದು ಮೈಸೂರು ಪೊಲೀಸರು ತನಿಖೆ ಆರಂಭಿಸಿ ಪೊಲೀಸರು, ಮಹತ್ವದ ದಾಖಲೆಗಳನ್ನು ಕಲೆ ಹಾಕಿದ್ದಾರೆ. ದೇವರಾಜ ಉಪವಿಭಾಗದ ಎಸಿಪಿ ಶಶಿಧರ್ ನೇತೃತ್ವದ ತನಿಖಾ ತಂಡ, ಇಂದು ಸಂದೇಶ್ ದಿ ಪ್ರಿನ್ಸ್ಗೆ ಭೇಟಿ ನೀಡಿತ್ತು.

ಹೋಟೆಲ್ ಮಾಲೀಕ ಸಂದೇಶ್ ಅವರೊಂದಿಗೆ ಮಾತನಾಡಿದ ಪೊಲೀಸರು, ಘಟನೆಗೆ ಬಗ್ಗೆ ಪ್ರಾಥಮಿಕ ಮಾಹಿತಿ ಕಲೆ ಹಾಕಿದ್ರು. ಹಲ್ಲೆಗೆ ಒಳಗಾದ ವ್ಯಕ್ತಿ ಎನ್ನಲಾದ ಗಂಗಾಧರ್ ಅವರನ್ನು ವಿಚಾರಣೆಗೆ ಒಳಪಡಿಸಿದ್ರು. ಗಂಗಾಧರ್ ನೀಡಿದ ಹೇಳಿಕೆಗಳನ್ನು ದಾಖಲು ಮಾಡಿಕೊಂಡ್ರು. ಸಿಸಿ ಕ್ಯಾಮರಾ ಫುಟೇಜ್ ಹೊಂದಿರುವ ಹಾರ್ಡ್ ಡಿಸ್ಕ್ ಕೊಂಡೊಯ್ದರು.

ಹೋಟೆಲ್ ಸಿಬ್ಬಂದಿ ಗಂಗಾಧರ್ ಹೇಳಿಕೆ ಪ್ರಕರಣದ ನಿರ್ಣಾಯಕ ಅಂಶವಾಗಿತ್ತು. ವಿಚಾರಣೆ ಸಂದರ್ಭದಲ್ಲಿ ಗಂಗಾಧರ್ ತಮ್ಮ ಮೇಲಿನ ಹಲ್ಲೆ ಆರೋಪವನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ರು. ಇಂದ್ರಜಿತ್ ಆರೋಪಗಳು ಸುಳ್ಳು. ನಾನು ದಲಿತನಲ್ಲ, ನನಗೆ ಮದುವೆಯೂ ಆಗಿಲ್ಲ. ದರ್ಶನ್ ಬೈದಿದ್ದು ನಿಜ, ಆದ್ರೆ ಹೊಡೆದಿಲ್ಲ ಅಂತ ಹೇಳಿಕೆ ನೀಡಿದ್ರು.

ಅಂದು ರಾತ್ರಿ ಪಾಳಿಯಲ್ಲಿ ಕೆಲಸ ಮಾಡಿದ್ದ ಸಪ್ಲೈಯರ್ ಸಮೀರ್, ಬಿಲ್ ಕೌಂಟರ್ ಸಿಬ್ಬಂದಿ ಪ್ರಕಾಶ್ ಅವರೂ ಹಲ್ಲೆ ನಡೆದಿಲ್ಲ ಅಂತಲೇ ಹೇಳಿಕೆ ನೀಡಿದ್ದಾರೆ. ಇವರು ನೀಡುತ್ತಿರುವ ಹೇಳಿಕೆಗಳಿಗೂ ವೈರಲ್ ಆಗುತ್ತಿರುವ ಆಡಿಯೋಗಳಿಗೂ ತಾಳಮೇಳವೇ ಸರಿ ಹೊಂದುತ್ತಿಲ್ಲ. ಹೋಟೆಲ್ನಲ್ಲಿ ಅಂದು ರಾತ್ರಿ ಕೆಲಸ ಮಾಡಿದ್ದ ನೌಕರ ಮಾತನಾಡಿರುವ ಆಡಿಯೋ ನಿನ್ನೆಯೇ ವೈರಲ್ ಆಗಿತ್ತು. ದರ್ಶನ್ ನಮ್ ಹೋಟೆಲ್ ಹುಡುಗರಿಗೆ ರಪಾ ರಪಾ ಅಂತ ಹೊಡೆದ್ರು ಅಂತ ಆ ಹೋಟೆಲ್ ಸಿಬ್ಬಂದಿ ವಿವರಿಸಿದ್ದಾರೆ.

ಸಂದೇಶ್ ನಿನ್ನೆಯಿಂದಲೂ ನಮ್ಮ ಹೋಟೆಲ್ನಲ್ಲಿ ಹಲ್ಲೆ ಪ್ರಕರಣ ನಡೆದಿಲ್ಲ ಅಂತಲೇ ವಾದಿಸುತ್ತಿದ್ದಾರೆ. ಇಂದೂ ಅದೇ ಹೇಳಿಕೆ ನೀಡಿದ್ದಾರೆ. ಆದ್ರೆ ಅವರೇ ಮಾತನಾಡಿರುವ ಆಡಿಯೋವೊಂದು ಬಹಿರಂಗವಾಗಿದೆ. ದರ್ಶನ್ ಹೋಟೆಲ್ ಸಿಬ್ಬಂದಿಗೆ ಹೊಡೆದಿರೋದನ್ನು ಸ್ವತಃ ಸಂದೇಶ್ ಒಪ್ಪಿಕೊಂಡಿದ್ದಾರೆ.

ಆಡಿಯೋದಲ್ಲಿ ಒಪ್ಪಿಕೊಂಡಿರೋದು ನಿಜವೋ ಅಥವಾ ಮಾಧ್ಯಮಗಳ ಮುಂದೆ ನೀಡುತ್ತಿರುವ ಹೇಳಿಕೆ ನಿಜವೋ ಸಂದೇಶ್ ಅವರೇ ಸ್ಪಷ್ಟಪಡಿಸಬೇಕು. ಸುದ್ದಿಗೋಷ್ಠಿ ನಡೆಸಿ ವಿವರಣೆ ನೀಡುತ್ತೇನೆ ಎಂದಿದ್ದ ನಟ ದರ್ಶನ್, ಸ್ನೇಹಿತರ ಮನೆಯಲ್ಲಿ ಆಷಾಢ ಶುಕ್ರವಾರದ ಊಟ ಮಾಡಿ ರಿಲ್ಯಾಕ್ಸ್ ಮೂಡ್ನಲ್ಲಿ ಇರುವಂತೆ ಕಂಡುಬಂದ್ರು.

error: Content is protected !!