ಕೂಗು ನಿಮ್ಮದು ಧ್ವನಿ ನಮ್ಮದು

ಕಾಂಗ್ರೆಸ್ಗೆ ಬಿಗ್ ಶಾಕ್: ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುತ್ತಾರಾ ಡಿಕೆ ಸುರೇಶ್?

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲ್ಲುವಿನ ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್ ಮುಂದಿನ ವರ್ಷ ಎದುರಾಗಲಿರುವ ಲೋಕಸಭೆ ಚುನಾವಣೆಗೆ ಭರ್ಜರಿ ತಯಾರಿ ನಡೆಸಿದೆ. ರಾಜ್ಯದಲ್ಲಿ ಒಟ್ಟು 28 ಕ್ಷೇತ್ರಗಳಲ್ಲಿ ಕನಿಷ್ಠ 20 ಸ್ಥಾನಗಳನ್ನು ಗೆಲ್ಲಲು ಕಾಂಗ್ರೆಸ್ ಪಣತೊಟ್ಟಿದೆ. ಆದ್ರೆ, ಇದರ ಮಧ್ಯೆ 2019ರ ಲೋಕಸಭೆ ಚುನಾವಣೆ ರಾಜ್ಯದ ಏಕಕೈಕ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ರಾಜಕೀಯದ ಬಗ್ಗೆ ವೈರಾಗ್ಯದ ಮಾತುಗಳನ್ನಾಡುತ್ತಿದ್ದಾರೆ. ಅಲ್ಲದೇ ಇದೀಗ ರಾಜಕಾರಣದಿಂದ ಹಿಂದೆ ಸರಿಯುವ ಮಾತುಳನ್ನಾಡಿದ್ದು, ರಾಜ್ಯ ಕಾಂಗ್ರೆಸ್ನಲ್ಲಿ ಸಂಚಲನ ಮೂಡಿಸಿದೆ.

ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಸುರೇಶ್, ರಾಜಕಾರಣದಲ್ಲಿ ನೆಮ್ಮದಿ ಎನ್ನುವುದೇ ಇಲ್ಲ. ರಾಜಕೀಯ ಅಂದರೆ ಹೊರಗೆ ಜನರ ಬಳಿಯೂ ನೆಮ್ಮದಿ ಇಲ್ಲ. ಜೊತೆಗೆ ಇರುವವರ ಬಳಿಯೂ ನೆಮ್ಮದಿ ಇಲ್ಲ. ರಾಜಕಾರಣ ಸಾಕಾಗಿದೆ. ಹೀಗಾಗಿ ರಾಜಕಾರಣದಿಂದ ದೂರ ಉಳಿಯುತ್ತೇನೆ ಎಂದು ಮತ್ತೊಮ್ಮೆ ಪುನರುಚ್ಚರಿಸಿದರು.

ಪಕ್ಷವನ್ನು ಅಧಿಕಾರಕ್ಕೆ ತರಲು ಕಷ್ಟ ಪಟ್ಟವರು ಸಂತೋಷವಾಗಿದ್ದಾರೆ. ಅವರೆಲ್ಲಾ ಅಧಿಕಾರದಲ್ಲಿ ಇದ್ದಾರೆ. ಸಂತೋಷವಾಗಿ ಅನುಭವಿಸಲಿ. ನನಗೆ ರಾಜಕಾರಣ ಬೇಡ ಎಂದು ಪರೋಕ್ಷವಾಗಿ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟ ಡಿಕೆ ಸುರೇಶ್, ನಾನು ನನ್ನ ಮನಸ್ಸಿನರುವ ವಿಚಾರವನ್ನು ಕಾರ್ಯಕರ್ತರ ಬಳಿ ತಿಳಿಸಿದ್ದೇನೆ. ಬೇರೆಯವರಿಗೆ ಅವಕಾಶ ಆಗಬೇಕು ಎನ್ನುವುದು ನನ್ನ ಉದ್ದೇಶ. ಸಾಕಷ್ಟು ಜನ ನಾಯಕರು ಇದ್ದಾರೆ. ನಾನು ಕಾರ್ಯಕರ್ತನಾಗಿ ಕೆಲಸ ಮಾಡಲು ಸಿದ್ದವಾಗಿದ್ದೇನೆ ಎಂದು ಸ್ಪಷ್ಟಪಡಿಸಿಸದರು.

ಇನ್ನೂ ಹನ್ನೊಂದು ತಿಂಗಳ ಅವಕಾಶ ಇದೆ. ಕ್ಷೇತ್ರದ ಜನರಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತೇನೆ. ಪಕ್ಷ ಸಂಘಟನೆ ಒಂದು ಭಾಗ. ಚುನಾವಣಾ ಸ್ಪರ್ಧೆ ಮಾಡಿ ಗೆಲ್ಲುವುದು ಇನ್ನೊಂದು ಭಾಗ. ನನಗೆ ಕೆಲಸ ಮಾಡಿರುವ ಬಗ್ಗೆ ತೃಪ್ತಿಯಿದೆ. ಸಾಕಷ್ಟು ಜನ ನಾಯಕರು ಇದ್ದಾರೆ, ಪಕ್ಷ ಸಂಘಟನೆ ಮಾಡಿರುವ ಹಿರಿಯರು ಇದ್ದಾರೆ. ಅವರಿಗೆ ಅವಕಾಶ ಸಿಗಬೇಕು. ನನಗೆ ಬೇಸರವಿಲ್ಲ, ಕ್ಷೇತ್ರದ ಜನರ ಜೊತೆ ಖುಷಿಯಿಂದ ಕೆಲಸ ‌ಮಾಡುತ್ತಿದ್ದೇನೆ. ವೈರಾಗ್ಯ ಎನ್ನುವುದು ನನಗೆ ಬಂದಿಲ್ಲ ಎಂದರು.

ಪಕ್ಷ ಅಧಿಕಾರಕ್ಕೆ ಬರಲು ನಮ್ಮ ಶ್ರಮವಿಲ್ಲ. ಅಧಿಕಾರದಲ್ಲಿರುವವರ ಶ್ರಮವಿದೆ. ಎಲ್ಲಾ ಸಚಿವರು, ಶಾಸಕರ ಶ್ರಮವಿದೆ. ನೆಮ್ಮದಿಯಾಗಿ ಎಂಜಾಯ್ ಮಾಡಲಿ. ನನಗೆ ರೆಸ್ಟ್ ಬೇಕು, ರಾಜಕೀಯ ಗೊಂದಲಾಟವಿದೆ. ರಾಜಕೀಯ ಸರಿ ಎನ್ನಿಸುವುದಿಲ್ಲ, ಪಕ್ಕಾ ರಾಜಕಾರಣಿಗೆ ಸೆಟ್ ಆಗಲಿದೆ. ರಾಜಕಾರಣಿಗಳ ಬಗ್ಗೆ ಜನರಲ್ಲೂ ಮರ್ಯಾದೆ ಇಲ್ಲ. ಒಳಗಡೆಯೂ ಮರ್ಯಾದೆ ಇಲ್ಲ. ಇಲ್ಲಿ ಕೆಲಸ ಮಾಡಲು ನೆಮ್ಮದಿಯಿಲ್ಲ ಎಂದು ರಾಜಕಾರಣವೇ ಬೇಡ ಎಂಬ ಅರ್ಥದಲ್ಲಿ ಹೇಳಿದರು.

error: Content is protected !!