ಬೆಂಗಳೂರು: ಕೆ.ಎಸ್.ಈಶ್ವರಪ್ಪ ಅವರಿಗೆ ದಿನಕ್ಕೊಮ್ಮೆ ನನ್ನ ಹೆಸರು ಹೇಳದಿದ್ರೆ ನಿದ್ರೆಯೇ ಬರುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಿಡಿಕಾರಿದ್ದಾರೆ.
ನಗರದ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ವೈಯಕ್ತಿಕ ವಿಚಾರಗಳಿಗೆ ಕೊಲೆ ನಡೆದಿದೆ ಎಂದು ಮಾಧ್ಯಮದಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಹೇಳಿಕೆ ನೀಡಿರುವುನ್ನು ಗಮನಿಸಿದ್ದೇನೆ. ಈಶ್ವರಪ್ಪ ಅವರದ್ದು, ಹರಕು ಬಾಯಿ ಅಂತ ಗೊತ್ತಿದೆ.
ಈಶ್ವರಪ್ಪ ಅವರ ಬಗ್ಗೆ ನಮ್ಮ ನಾಯಕರೆ ಹೇಳಿದ್ದಾರೆ. ಈ ಕೊಲೆ ನಮಗೂ ನೋವಾಗಿದೆ. ಇದನ್ನು ನಾನು ನಮ್ಮ ಪಕ್ಷ ಖಂಡಿಸುತ್ತೇವೆ. ಈ ರೀತಿ ದೇಶ ದ್ರೋಹಿ ಹೇಳಿಕೆ ಕೊಟ್ಟ ಈಶ್ವರಪ್ಪ ಅವರ ಮೇಲೆ ಮೊದಲು ಕೇಸು ದಾಖಲಿಸುವ ಮೂಲಕ ಕ್ರಮ ಕೈಗೊಳ್ಳಬೇಕೆಂದು ಡಿ.ಕೆ.ಶಿವಕುಮಾರ್ ಕಿಡಿಕಾರಿದ್ರು. ಈಶ್ವರಪ್ಪ ಅವರಿಗೆ ದಿನಕ್ಕೊಮ್ಮೆ ನನ್ನ ಹೆಸರು ಹೇಳದಿದ್ದರೆ ನಿದ್ರೆನೇ ಬರುವುದಿಲ್ಲ. ಕೊಲೆ ಅಕ್ಷಮ್ಯ, ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ.
ಕೊಲೆಗಡುಕರ ಬಂಧನ ಆಗಬೇಕು ತನಿಖೆಯೂ ಆಗಬೇಕು. ಅವರ ಕ್ಷೇತ್ರದಲ್ಲೆ ಆಗಿದೆ. ಹೀಗಾಗಿ ಅವರ ಹೊಣೆಗಾರಿಕೆ ಹೆಚ್ಚು ಇದೆ. ನನ್ನ ಪ್ರಚೊದನೆಯಿಂದ ಆಗಿದ್ರೆ ನನ್ನ ಮೇಲೆಯೂ ತನಿಖೆಯಾಗಲಿ. ಕಾನೂನು, ತನಿಖೆ ವಿಚಾರದಲ್ಲಿ ನಾವು ಮಧ್ಯೆ ಪ್ರವೇಶ ಮಾಡಲ್ಲ ಎಂದಿದ್ದಾರೆ. ಡಿ.ಕೆ.ಶಿವಕುಮಾರ್ ಇನ್ನೂ ಶಿವಮೊಗ್ಗದಲ್ಲಿ ಅನ್ಯಕೋಮಿನ ಗುಂಪೊಂದು ಯುವಕನನ್ನು ಹತ್ಯೆಗೈದಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಈಶ್ವರಪ್ಪ ಅವರು, ಕೇಸರಿ ಶಾಲು ಹಂಚಿದ್ದಾರೆ. ರಾಷ್ಟ್ರ ಧ್ವಜ ತೆಗೆದು ಭಗವಾಧ್ವಜ ಹಾರಿಸಿದ್ದಾರೆ. ಎಂಬಂತಹ ಡಿ.ಕೆ. ಶಿವಕುಮಾರ್ ಅವರ ಪ್ರಚೋದನಕಾರಿ ಹೇಳಿಕೆಗಳಿಂದ ಕುಮ್ಮಕ್ಕು ಪಡೆದು ಮುಸ್ಲಿಂ ಗೂಂಡಾಗಳು ಕೊಲೆ ಮಾಡಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.