ಬೆಂಗಳೂರು: ಇವತ್ತು ೭೫ನೇ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆ ಕಾಂಗ್ರೆಸ್ ಭವನದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗಿದೆ. ಈ ವೇಳೆ K.P.C.C ಅಧ್ಯಕ್ಷ D.K.ಶಿವಕುಮಾರ್ರವರು ಭಾಷಣ ಮಾಡುವಾಗ ಎಡವಟ್ಟು ಮಾಡಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ನಡೆಸಿ, ಕಾರ್ಯಕ್ರಮವನ್ನುದ್ದೇಶಿಸಿ ಕಾಂಗ್ರೆಸ್ ನಾಯಕರು ಮಾತನಾಡಿದ್ರು. ಇದೆ ವೇಳೆ ಡಿಕೆಶಿ ಭಾಷಣ ಮಾಡುವಾಗ, ಹುತಾತ್ಮರಾದ ಸೋನಿಯಾ ಗಾಂಧಿ ಎಂದು ಬಾಯಿ ತಪ್ಪಿ ಹೇಳಿ ಬಳಿಕ ಸಾರಿ (Sorry), ಹುತಾತ್ಮರಾದ ಇಂದಿರಾ ಗಾಂಧಿ ಎಂದು ತಪ್ಪನ್ನು ತಿದ್ದಿಕೊಂಡು ಭಾಷಣವನ್ನು ಮುಂದುವರೆಸಿದ್ರು.
ನಂತರ ದೇಶ ಕಟ್ಟಲು ಎದುರಾಗಿರುವ ಸವಾಲುಗಳನ್ನು ಮೆಟ್ಟಿ ನಿಂತು ಸ್ವಾತಂತ್ರ್ಯಕ್ಕಾಗಿ ಇಂದಿರಾಗಾಂಧಿಯವರು ಹೋರಾಟ ಮಾಡಿದ್ದಾರೆ. ಆದ್ರೆ ಈಗ ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡಲಾಗುತ್ತಿದೆ. ಇದರ ವಿರುದ್ಧ ನಾವು ನೀವುಗಲೂ ಹೋರಾಟ ಬೇಕಾಗಿದೆ. ಇಂದಿರಾ ಕ್ಯಾಂಟೀನ್ ಹೆಸರನ್ನು ಬದಲಾಯಿಸಲು ಸಂಚು ನಡೆಸಿದ್ದಾರೆ. ಆದ್ರೆ ಇಂತಹ ದೊಡ್ಡ ಮಹಾನೀಯರ ಹೆಸರನ್ನು ಬದಲಿಸಿದ್ರು ಅವರು ಜನರ ಮನಸ್ಸಿನಲ್ಲಿ ಎಂದಿಗೂ ಚಿರಸ್ಥಾಯಿ ಎನ್ನುವುದನ್ನು ಮರೆಯ ಬಾರದು ಎಂದು BJP ವಿರುದ್ಧ ಡಿಕೆಶಿಯವರು ಕೆಂಡ ಕಾರಿದ್ದಾರೆ. ಇನ್ನೂ ಈ ಕಾರ್ಯಕ್ರಮದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಪಕ್ಷದ ಕೆಲವು ಮುಖಂಡರು ಹಾಗೂ ಅನೇಕ ನಾಯಕರು ಭಾಗವಹಿಸಿದ್ರು.