ಕೂಗು ನಿಮ್ಮದು ಧ್ವನಿ ನಮ್ಮದು

ಇಂದು ಧಾರವಾಡ ಬಂದ್, ಬೃಹತ್ ಪ್ರತಿಭಟನೆ

ವಿದ್ಯುತ್ ದರ ಏರಿಕೆ ಖಂಡಿಸಿ ಇಂದು ಧಾರವಾಡ ಬಂದ್ಗೆ ಕರೆ ಕೊಡಲಾಗಿದೆ. ಧಾರವಾಡ ಬಂದ್ಗೆ ಬಹುತೇಕ ಎಲ್ಲ ವಲಯಗಳು ಬೆಂಬಲ ಸೂಚಿಸಿವೆ. ವರ್ತಕರು, ಎಪಿಎಂಸಿ, ಬಟ್ಟೆ ವ್ಯಾಪಾರ, ಸ್ಟೇಷನರಿ, ಹೋಟೆಲ್, ಬೇಕರಿ ಮಾಲೀಕರು, ಹಾರ್ಡ್ವೇರ್ ವ್ಯಾಪಾರಿಗಳ ಸಂಘ, ಬೇಲೂರು ಕೈಗಾರಿಕಾ ಪ್ರದೇಶದ ಉದ್ಯಮಿಗಳು ಬಂದ್ಗೆ ಬೆಂಬಲ ಸೂಚಿಸಿವೆ.

ಇಂದು ಬೆಳಗ್ಗೆ 11 ಗಂಟೆಗೆ ಅಂಗಡಿ‌ ಮುಂಗಟ್ಟು ಬಂದ್ ಮಾಡಿ ಕೆಸಿಸಿ ಬ್ಯಾಂಕ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಱಲಿ ನಡೆಯಲಿದೆ.

error: Content is protected !!