ಕೂಗು ನಿಮ್ಮದು ಧ್ವನಿ ನಮ್ಮದು

ನಾರಾಯಣಪುರ ಬಲದಂಡೆ ಕೆನಾಲ್ ದಲ್ಲಿ ಮೊಸಳೆ ಪ್ರತ್ಯಕ್ಷ, ಆತಂಕದಲ್ಲಿ ಗ್ರಾಮಸ್ಥರು

ರಾಯಚೂರು: ಜಿಲ್ಲೆಯ ಲಿಂಗಸುಗೂರಿನ ದೇವರಭೂಪುರ ಹತ್ತಿರ ನಾರಾಯಣಪುರ ಬಲದಂಡೆ ಕೆನಾಲ್ ದಲ್ಲಿ ಮೊಸಳೆ ಪ್ರತ್ಯಕ್ಷವಾಗಿದ್ದು ಗ್ರಾಮಸ್ಥರು ಭಯಭೀತರಾಗಿದ್ದು, ಗ್ರಾಮದ ಮಂದಿ ಕಾಲುವೆ ನೀರನ್ನು ಹೆಚ್ಚು ಅವಲಂಬಿಸಿರುವುದರಿಂದ ಗ್ರಾಮದಲ್ಲಿ ಆತಂಕ ಮನೆ ಮಾಡಿದೆ. ದಿನನಿತ್ಯ ಕೆನಾಲ್ ದಲ್ಲಿ ಮಹಿಳೆಯರು ಬಟ್ಟೆ ತೊಳೆಯುತ್ತಾರೆ. ಜೊತೆಗೆ ಇದೇ ಕಾಲುವೆಯಲ್ಲಿ ಮಕ್ಕಳು, ಯುವಕರು ಈಜಾಡುತ್ತಾರೆ. ಹೀಗಾಗಿ ಎಲ್ಲರಲ್ಲಿ ಆತಂಕ ಹೆಚ್ಚಾಗಿದೆ.

ಮಹಿಳೆಯರು ಬಟ್ಟೆ ತೊಳೆಯುವಾಗ ಅಲ್ಲೆ ದೂರದಲ್ಲಿ ಮೊಸಳೆ ಕಾಣಿಸಿಕೊಂಡಿದೆ. ಆಗ ಕಾಲುವೆಯಲ್ಲಿದ್ದ ಜನರು ಮೊಸಳೆ ಕಂಡು ಹೆದರಿದ್ದಾರೆ. ಅಪಾಯದ ಮುನ್ನಚ್ಚರಿಕೆ ಇರುವುದರಿಂದ ಈ ಕೂಡಲೇ ಇಲ್ಲಿಯ ಅಧಿಕಾರಿಗಳು ಎಚ್ಚೆತ್ತುಕೊಂಡು ಮೊಸಳೆ ಸೆರೆಗೆ ಮುಂದಾಗಬೇಕಿದೆ. ಮೊಸಳೆಯನ್ನು ಹಿಡಿಯುವಂತೆ ಗ್ರಾಮಸ್ಥರು ಅಧಿಕಾರಿಗಳಿಗೆ ಒತ್ತಾಯಿಸಿದ್ರು.

error: Content is protected !!