ದಾವಣಗೆರೆ: ಪ್ರೀತಿಸಿದ ಹುಡುಗಿ ತನ್ನನ್ನು ಮದುವೆಯಾಗುವುದಿಲ್ಲ ಎಂದು ನಿರಾಕರಿಸಿದ್ದಕ್ಕೆ ಪ್ರೇಮಿ ಸೊಸೈಡ್ ಮಾಡಿಕೊಂಡಿರುವ ಘಟನೆಯು ನಗರದ ಕರೂರು ಕೈಗಾರಿಕಾ ಪ್ರದೇಶದ ಬಳಿ ಇರುವ ರೈಲ್ವೆ ಟ್ರ್ಯಾಕ್ ಹತ್ತಿರ ಸಂಭವಿಸಿದೆ. ನಗರದ HKR ವೃತ್ತದ ಲೆನಿನ್ ನಗರದ ನೂತನ ಬಡಾವಣೆ ನಿವಾಸಿಯಾಗಿರುವ ಮಹಾಂತೇಶ್ ೨೪ ವಯಸ್ಸಿನ ಯುವಕ ಸೂಸೈಡ್ ಮಾಡಿಕೊಂಡಿದ್ದಾನೆ.
ಕೆಲವು ವರ್ಷಗಳಿಂದ ಕರೂರು ಕೈಗಾರಿಕಾ ಪ್ರದೇಶದಲ್ಲಿನ ಗಾರ್ಮೆಂಟ್ಸ್ ಅಲ್ಲಿ ಕೆಲಸ ಮಾಡುತ್ತಿದ್ದ, ಮಹಾಂತೇಶ್ ತನ್ನ ಕುಟುಂಬಕ್ಕೆ ಆಧಾರವಾಗಿದ್ದನು, ಇದೇ ಗಾರ್ಮೆಂಟ್ಸ್ ಅಲ್ಲಿನ ಯುವತಿ ಒಬ್ಬಳ ಪರಿಚಯವಾಗಿ, ನಂತರ ಆ ಪರಿಚಯ ಪ್ರೇಮಕ್ಕೆ ತಿರುಗಿದ್ದು, ಕೆಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ರು.
ಕೆಲವು ದಿನಗಳ ಹಿಂದೆಯೇ ಈ ಯುವತಿಯು ಮದುವೆಯಾಗಲು ತಿರಸ್ಕರಿಸಿದ್ದು, ಬೇರೆ ವ್ಯಕ್ತಿಯ ಜೊತೆಗೆ ನಿಶ್ಚಿತಾರ್ಥವಾಗಿದೆ ಎಂದು ತಿಳಿದಿದೆ. ಹೀಗಾಗಿ ಮಾನಸಿಕವಾಗಿ ಕುಗ್ಗಿರುವ ಮಹಾಂತೇಶ್, ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೂ ಮುನ್ನ ನನ್ನ ಸಾವಿಗೆ ನಾನು ಪ್ರೀತಿ ಮಾಡಿದ ಹುಡುಗಿಯೇ ಕಾರಣವೇಂದು ಬರೆದ್ದಿದಾನೆ. ಕೊನೆಲಿ ಅಕ್ಕ ನಿಮ್ಮನ್ನು ಬಿಟ್ಟು ಹೋಗುತ್ತಿದ್ದೇನೆ ನನ್ನನ್ನು ಕ್ಷಮಿಸಿ ಎಂದು ವಾಟ್ಸಪ್ ಅಲ್ಲಿ ಸ್ಟೇಟಸ್ಗೆ ಹಾಕಿ, ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಾಹಾಂತೇಶ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಈ ಕುರಿತು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.