ಕೂಗು ನಿಮ್ಮದು ಧ್ವನಿ ನಮ್ಮದು

3 ವರ್ಷದ ಹಿಂದೆ ನಡೆದ ಕೊಲೆಗೆ ಈಗ ಮತ್ತೊಬ್ಬ ಬಲಿ

ಹಾಸನ: ತಲೆಯ ಮೇಲೆ ಕಲ್ಲು ಎತ್ತಿಹಾಕಿ ಯುವಕನ ಒಬ್ಬನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆಯು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನಲ್ಲಿ ಸಂಭವಿಸಿದೆ. ನವಾಜ್ ಎಂಬ ೨೭ ವರ್ಷದ ಯುವಕ ಕಲೆಯಾಗಿದ್ದು, ಹಾಸನ ಜಿಲ್ಲೆಯ ಅರಸೀಕೆರೆ ನಗರದ ಹೊರವಲಯದ ಚಿಕ್ಕ ತಿರುಪತಿ ರಸ್ತೆಯ ಕಾರೆಹಳ್ಳಿಯ ಸಮೀಪದಲ್ಲಿ ಈ ಕೊಲೆಯು ಸಂಭವಿಸಿದೆ.

3 ವರ್ಷಗಳ ಹಿಂದೆ ಮೀನು ಹಿಡಿಯುವುದರ ಸಲುವಾಗಿ ಎರೆಡು ಯುವಕರ ತಂಡದ ನಡುವೆ ಜಗಳ ಆಗಿತ್ತು. ಆ ಗಲಾಟೆಯಲ್ಲಿ ಆಂಬುಲೆನ್ಸ್ ಚಾಲಕ ಅರುಣ್ ಎಂಬುವನನ್ನು ಅರಸೀಕೆರೆ ನಗರದ ಹೃದಯಭಾಗದಲ್ಲಿರುವ ಅಂಬೇಡ್ಕರ್ ವೃತ್ತದ ಹತ್ತಿರ, ಚಾಕು ಚುಚ್ಚಿ ಬರ್ಬರವಾಗಿ ಕೊಲೆ ಮಾಡಿದ್ರು. ಆಗ ಜೈಲಿನಲ್ಲಿದ್ದ ಈತ ಇತ್ತೀಚೆಗಷ್ಟೇ ಬೇಲ್ ಪಡೆದು ನಗರದಲ್ಲಿ ಮತ್ತೆ ಹಲವು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದ್ದು, ಅರುಣ್ ಕಡೆಯ ಹುಡುಗರೆ ಇವನನ್ನು ಕೊಲೆ ಮಾಡಿರಬಹುದು ಎಂಬ ಶಂಕೆ ಈಗ ಪೊಲೀಸರದ್ದು.

error: Content is protected !!