ಲಕ್ನೋ: ಸ್ವಾತಂತ್ರ್ಯೋತ್ಸವಕ್ಕೆ ಭಗತ್ ಸಿಂಗ್ ಪಾತ್ರದ ನಾಟಕವನ್ನು ಪ್ರ್ಯಾಕ್ಟೀಸ್ ಮಾಡುವ ವೇಳೆಯಲ್ಲಿ ಆಕಸ್ಮಕವಾಗಿ ಬಾಲಕನೊಬ್ಬ ನೇಣಿಗೆ ಬಲಿಯಾದ ಘಟನೆಯು ಉತ್ತರಪ್ರದೇಶದ ಬಡೌನ್ ಹಳ್ಳಿಯಲ್ಲಿ ಸಂಭವಿಸಿದೆ. ಇನ್ನೂ ಶಿವಂ ಎಂಬ ಹತ್ತು ವರ್ಷದ ಬಾಲಕನು ಮೃತಪಟ್ಟಿದ್ದಾನೆ. ಇನ್ನೂ ಈ ಬಾಲಕ ಸ್ವಾತಂತ್ರ್ಯ ಹೋರಾಟಗಾರನಾದ ಭಗತ್ ಸಿಂಗ್ ಅವರ ಪಾತ್ರವನ್ನು ಮಾಡುವಾಗ ನೇಣಿಗೆ ಹಾಕುವ ದೃಶ್ಯವನ್ನು ಶಿವಂ ಪ್ರ್ಯಾಕ್ಟೀಸ್ ಮಾಡುತ್ತಿರುವಾಗ ಆಕಸ್ಮಿಕವಾಗಿ ಸಾವಿಗೆ ಶರನಾಗಿದ್ದಾನೆ. ಜೊತೆಗೆ ಈಗಾಗಲೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಕ್ಕೆ ದೇಶಾದ್ಯಂತ ಭಾರೀ ಸಿದ್ಧತೆಗಳು ನಡೆಯುತ್ತಿವೆ.
ಇನ್ನೂ ಇದೇ ವೇಳೆಯಲ್ಲಿ ಅದೆಷ್ಟೋ ಮಕ್ಕಳು ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಪಾತ್ರ ಮಾಡೋದಕ್ಕೆ ಕಾತುರದಿಂದ ಕಾಯುತ್ತಿದ್ದಾರೆ. ಇನ್ನೂ ಈ ಬಾಲಕ ಉತ್ತರ ಪ್ರದೇಶದವನ್ನಾಗಿದ್ದು, ಈ ಬಾಲಕ ನಾಟಕವನ್ನು ಪ್ರ್ಯಾಕ್ಟೀಸ್ ಮಾಡುತ್ತಿದ್ದ. ಜೊತೆಗೆ ಭಗತ್ ಸಿಂಗ್ ಅವರನ್ನು ಗಲ್ಲಿಗೇರಿಸವ ದೃಶ್ಯವನ್ನು ಪ್ರ್ಯಾಕ್ಟೀಸ್ ಮಾಡುವ ವೇಳೆಯಲ್ಲಿ, ಬಾಲಕ ಕುತ್ತಿಗೆಗೆ ಹಗ್ಗವನ್ನು ಕಟ್ಟಿಕೊಂಡು ಸ್ಟೂಲ್ ಮೇಲೆ ನಿಂತಿದ್ದನು. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾನೆ. ಇನ್ನೂ ಕುಟುಂಬಸ್ಥರು ಪೊಲೀಸರಿಗೆ ಯಾವುದೇ ಮಾಹಿತಿಯನ್ನು ಕೋಡದೆ ಬಾಲಕನ ಅಂತ್ಯಸಂಸ್ಕಾರವನ್ನು ಮಾಡಿದ್ದಾರೆ ಎನ್ನಲಾಗಿದೆ.