ಕೂಗು ನಿಮ್ಮದು ಧ್ವನಿ ನಮ್ಮದು

5 ವರ್ಷದ ಮಗನನ್ನು ಕೊಂದು, ತಲೆ ಮತ್ತು ಇತರ ಭಾಗಗಳನ್ನು ಬೇಯಿಸಿ ತಿಂದ ತಾಯಿ!

ತಾಯಿ ಎಂದರೆ ದೇವರ ಸ್ವರೂಪ ಎಂದು ನಂಬುವ ಈ ಸಮಾಜದಲ್ಲಿ ಇಂತಹ ಒಂದು ಭಯಾನಕ ಘಟನೆ ನಿಮ್ಮ ಮೌಲ್ಯಗಳ ಬಗ್ಗೆ ಮರುಯೋಚಿಸುವಂತೆ ಮಾಡುತ್ತದೆ. ಕೈ ತುತ್ತು ತಿನಿಸುವ ತಾಯಿ ಸ್ವಂತ ಮಗನನ್ನೇ ಕೊಂದು ಆ ಪುಟ್ಟ ಕಂದಮ್ಮನ ದೇಹದ ಮಾಂಸವನ್ನು ತಿಂದಿರುವ ಘಟನೆ ಈಜಿಪ್ಟ್ನಲ್ಲಿ ನಡೆದಿದೆ. ಹನಾ ಮೊಹಮ್ಮದ್ ಹಸನ್ ಎಂಬ 29 ವರ್ಷದ ಮಹಿಳೆ ತನ್ನ ಐದು ವರ್ಷದ ಮಗ ಯೂಸೆಫ್‌ನನ್ನು ಉದ್ದೇಶಪೂರ್ವಕವಾಗಿ ಕೊಂದ ಆರೋಪದ ಮೇಲೆ ವಿಚಾರಣೆಯನ್ನು ಎದುರಿಸತ್ತಿದ್ದಾಳೆ.

ಈಜಿಪ್ಟಿನ ಪಬ್ಲಿಕ್ ಪ್ರಾಸಿಕ್ಯೂಷನ್ ಆಕೆಗೆ ಯಾವುದೇ ಮಾನಸಿಕ ಅಸ್ವಸ್ಥತೆಗಳಿಲ್ಲ ಎಂದು ನಿರ್ಧರಿಸಿದೆ, ಇದು ಪ್ರಕರಣವನ್ನು ಇನ್ನಷ್ಟು ಭಯಾನಕವಾಗಿಸಿದೆ. ಹಸನ್ ಮಚ್ಚಿನಿಂದ ಮಗನ ತಲೆಗೆ ಮೂರು ಬಾರಿ ಹೊಡೆದು ಆತನನ್ನು ಕೊಂಡಿದ್ದಾಳೆ. ನಂತರ ಸಾಕ್ಷ್ಯವನ್ನು ನಾಶಮಾಡುವ ಪ್ರಯತ್ನದಲ್ಲಿ ಅವನ ದೇಹವನ್ನು ತುಂಡರಿಸಿ ಹೂಳಲು ಮುಂದಾಗಿದ್ದಾಳೆ, ಆದರೆ ಅವಶೇಷಗಳನ್ನು ಹೂಳುವ ಮೊದಲು ಆಕೆಯನ್ನು ಈಜಿಪ್ಟ್ ಪೊಲೀಸರು ಬಂಧಿಸಿದರು.

ಹಸನ್ ತನ್ನ ಮಗನ ತಲೆ ಮತ್ತು ಇತರ ಮಾಂಸವನ್ನು ಕುದಿಯುವ ನೀರಿನಲ್ಲಿ ಬೇಯಿಸಿ ಸೇವಿಸಿರುವುದು ಪತ್ತೆಯಾದಾಗ ಭೀಕರ ಅಪರಾಧದ ಪ್ರಮಾಣವು ಸ್ಪಷ್ಟವಾಯಿತು. ತನ್ನ ಮಾಜಿ ಪತಿ ಮತ್ತು ಅವನ ಕುಟುಂಬವನ್ನು ಯೂಸುಫ್‌ನೊಂದಿಗೆ ಸಂಪರ್ಕವನ್ನು ಇಟ್ಟುಕೊಳ್ಳುವುದನ್ನು ತಡೆಯಲು ಹಸನ್ ಈ ಹೇಯ ಕೃತ್ಯ ಎಸಗಿದ್ದಾಳೆ ಎಂದು ತನಿಖೆಯಿಂದ ತಿಳಿದುಬಂದಿದೆ.

ಹಸನ್ ಮಾನಸಿಕವಾಗಿ ಸದೃಢರಾಗಿದ್ದಾಳೆ ಮತ್ತು ಅವರ ತೀರ್ಪಿಗೆ ಧಕ್ಕೆ ತರುವಂತಹ ಯಾವುದೇ ಪದಾರ್ಥಗಳನ್ನು ಸೇವಿಸಿಲ್ಲ ಎಂಬುದನ್ನು ತಿಳಿದು ಅಧಿಕಾರಿಗಳು ಬೆಚ್ಚಿಬಿದ್ದರು. ಅಷ್ಟೇ ಅಲ್ಲದೆ ಹಸ್ಸನ್ ತನ್ನ ಮಗನ ತಲೆಯ ಭಾಗವನ್ನು ತಿನ್ನುವುದನ್ನು ಒಪ್ಪಿಕೊಂಡಳು, ಕಾರಣ ಕೇಳಿದಾಗ ಅವನು ತನ್ನೊಂದಿಗೆ ಶಾಶ್ವತವಾಗಿ ಇರಬೇಕೆಂದು ಮಗನ ಮಾಂಸವನ್ನು ಸೇವಿಸಿರುವುದಾಗಿ ತಿಳಿಸಿದಳು.

ಮಗನ ದೇಹದ ಭಯಾನಕ ದೃಶ್ಯದಿಂದಾಗಿ ಹಾಸನ್ ಮಾಜಿ ಪತಿ, ಎಚ್‌ಎ ಅವರನ್ನು ಮಗನ ಮೃತ ದೇಹವನ್ನು ನೋಡದಂತೆ ತಡೆಯಲಾಗಿದೆ ಎಂದು ವರದಿ ವಿವರಿಸಿದೆ. ನಾಲ್ಕು ವರ್ಷಗಳ ಹಿಂದೆ ದಂಪತಿಗಳು ದೂರವಾದ ಬಳಿಕವೂ, ಮಾಜಿ ಪತಿ ಎಚ್‌ಎ ಯೂಸೆಫ್ ಜೊತೆ ರಾಜಿ ಮಾಡಿಕೊಳ್ಳಲು ಮತ್ತು ಸಂಬಂಧವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದ್ದರು. ಆದಾಗ್ಯೂ, ಹಸನ್ ಮಗನನ್ನು ತನ್ನ ತಂದೆಯಿಂದ ದೂರವಿಟ್ಟರು, ಅಲ್ಲದೆ ಮಾಜಿ ಪತಿ ಎಚ್‌ಎ ಬಗ್ಗೆ ದ್ವೇಷವನ್ನು ತುಂಬಲು ಪ್ರಾರಂಭಿಸಿದ್ದರು ಎಂದು ಎಚ್‌ಎ ರೋಪಿಸಿದ್ದಾರೆ.

ತನ್ನ ಮಗ ಯೂಸುಫ್‌ ಒಳಿತಿಗಾಗಿ, ಅವನ ಜೀವನದಲ್ಲಿ ತಾನು ಇರಬೇಕು ಎಂಬ ಒಂದೇ ಕಾರಣಕ್ಕೆ ಹಸನ್ ಜೊತೆ ಸಂಪರ್ಕದಲ್ಲಿದ್ದೆ ಎಂದು ತಿಳಿಸಿದರು. ಅಲ್ಲದೆ ಮಗನ ಯೋಗಕ್ಷೇಮವನ್ನು ವಿಚಾರಿಸುತ್ತಾ ಅವನಿಗೆ ಬೇಕಾದ ವಸ್ತುಗಳನ್ನು ನೀಡುತ್ತಿದ್ದರು. ಆದರೆ ನಂತರದ ದಿನಗಳಲ್ಲಿ ಮಗನ ತಲೆಯಲ್ಲಿ ತಂದೆಯ ಬಗ್ಗೆ ಹಸನ್ ವಿಷ ಬೀಜ ಬಿತ್ತಿ, ತಂದೆ ಎಚ್‌ಎ ಅವರನ್ನು ದ್ವೇಷಿಸುವಂತೆ ಮಾಡಿದ್ದಳು. ಹಾಗಾಗಿ ಮಗನ ಯೋಗಕ್ಶ್ಮ ವಿಚಾರಿಸಲು ಎಚ್‌ಎ ಹಸನ್ ಕುಟುಂಬದವರ ಜೊತೆ ಸಂಪರ್ಕದಲ್ಲಿದ್ದರು

ಮಾಜಿ ಪತಿಯ ಸಂಪರ್ಕವನ್ನು ಸಂಪೂರ್ಣವಾಗಿ ಬಿಡಲು ಮತ್ತು ಸ್ವತಂತ್ರವಾಗಿರಲು ಈ ರೀತಿಯ ಹೀನಾಯ ಕೃತ್ಯವನ್ನು ಮಾಡಿರುವುದಾಗಿ ಹಸನ್ ಒಪ್ಪಿಕೊಂಡಿದ್ದಾಳೆ. ತನ್ನ ಮಾಜಿ ಪತಿ ವಿರುದ್ಧ ಸೇಡು ತೀರಿಸಿಕೊಳ್ಳುವ ಬಯಕೆಯಿಂದ ಆಕೆಯು ಈ ನಿರ್ಧಾರವನ್ನು ತೆಗೆದುಕೊಂಡಳು ಎಂದು ವಿಚಾರಣೆ ಸಮಯದಲ್ಲಿ ತಿಳಿಸಿದ್ದಾಳೆ, ತಂದೆ-ಮಗನನ್ನು ನಿರಂತರವಾಗಿ ಅವರನ್ನು ಬೇರ್ಪಡಿಸಲು ಪ್ರಯತ್ನಿಸಿದ್ದಳು ಆದರೆ ಆಕೆಯ ಪ್ರಯತ್ನಗಳು ವಿಫಲವಾದಾಗ ಸ್ವಂತ ಮಗನನ್ನೇ ಕೊಲ್ಲುವ ನಿರ್ಧಾರ ಮಾಡಿದ್ದಾಳೆ ಎಂದು ವಿಚಾರಣೆ ಸಂದರ್ಭದಲ್ಲಿ ತಿಳಿದುಬಂದಿದೆ.

error: Content is protected !!