ಕೂಗು ನಿಮ್ಮದು ಧ್ವನಿ ನಮ್ಮದು

ಬ್ಯೂಟಿ ಪಾರ್ಲರ್ ಆಂಟಿಗಾಗಿ ಪತ್ನಿಯನ್ನೆ ಕೊಲೆ ಮಾಡಿದನಾ ಗಂಡ? ಮದುವೆಯಾಗಿ ಮಗುವಿದ್ದರೂ ಗಂಡನಿಗೆ ಬೇರೊಂದು ಲವ್ವಿಡವ್ವಿ!

ಗಂಡ-ಹೆಂಡತಿ ಮತ್ತು ಒಂದು ಮಗು ಜೊತೆಗೆ ಹೆತ್ತುಹೊತ್ತ ತಂದೆ-ತಾಯಿಯಿಂದ ಪರಿಪೂರ್ಣವಾಗಿದ್ದ ಕುಟುಂಬ ಅದು, ದುಡಿಯೋಕ್ಕೆ ಕೆಲಸ, ಇರೋಕ್ಕೆ ಮನೆ ಎಲ್ಲವೂ ಇದ್ದ ಸುಖೀ ಕುಟುಂಬವದು. ಆದ್ರೆ ಮುದ್ದಾದ ಪತ್ನಿಯಿದ್ದರೂ ಪರಸ್ತ್ರೀಯ ಪರಸಂಗಕ್ಕೆ ಬಿದ್ದ ಪತಿರಾಯ ಅನೈತಿಕ ಸಂಬಂಧ ಪ್ರಶ್ನಿಸಿದಕ್ಕೆ ಅಗ್ನಿಸಾಕ್ಷಿಯಾಗಿ ಮದುವೆಯಾಗಿದ್ದ ಪತ್ನಿಗೆ ಕೊಳ್ಳಿಯಿಟ್ಟಿದ್ದಾನೆ. ಮನೆ ಮಗಳನ್ನ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕೂಗಾಟ ಚೀರಾಟ ನೋವು ಆಕ್ರಂದನ ಆಕ್ರೋಶ ಎಲ್ಲವೂ ಒಮ್ಮೆಲೆಗೆ ಉಮ್ಮಳಿಸಿ ಬರ್ತಿದೆ ಜೊತೆಯಲ್ಲಿ ಆಡಿ ಬೆಳೆದಿದ್ದ ಸಹೋದರಿ ಇಷ್ಟು ಬೇಗ ನಮ್ಮನ್ನೆಲ್ಲ ಬಿಟ್ಟು ಹೋದ್ಲಾ ಅಂತ ಒಡ ಹುಟ್ಟಿದವಳು ಗೋಳಾಡುತ್ತಿದ್ರೆ ಇತ್ತ ಸಂಬಂಧಿಕರು ಸಹ ಒಂದು ಕ್ಷಣ ಮೌನಕ್ಕೆ ಜಾರಿದ್ದಾರೆ.

ಹೌದು ಅಷ್ಟಕ್ಕೂ ಈ ಆಕ್ರಂದನ ನೋವಿಗೆ ಕಾರಣವಾಗಿದ್ದು ಜಯಂತಿ ಎಂಬ ಮಹಿಳೆಯ ಸಾವು ಅಂದಹಾಗೆ ಮೇಲಿನ ಪೋಟೋದಲ್ಲಿರುವ ಈ ಮುದ್ದಾದ ಜೋಡಿಯ ಹೆಸರು ಜಯಂತಿ ಮತ್ತು ಲಕ್ಷ್ಮೀಪತಿ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಜಯಮಹಲ್ ಬಡಾವಣೆಯಲ್ಲಿ ವಾಸವಾಗಿದ್ದ ಈ ಕುಟುಂಬ ಒಂದು ಮಗು ಅತ್ತೆ ಮಾವ ಜೊತೆ ಕಳೆದ 16 ವರ್ಷಗಳಿಂದ ಸುಖವಾಗಿಯೇ ಸಂಸಾರ ನಡೆಸುತ್ತಿತ್ತು. ಆದ್ರೆ ಚೆನ್ನಾಗಿದ್ದ ಕುಟುಂಬದಲ್ಲಿ ವಿಜಯಪುರ ಪಟ್ಟಣದಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ಓರ್ವ ಮಹಿಳೆಯ ಜೊತೆ ಗಂಡ ಲಕ್ಷ್ಮೀಪತಿಗೆ ಪರಿಚಯವಾಗಿದ್ದು ಆಕೆಯ ಜೊತೆ ಅನೈತಿಕ ಸಂಬಂಧವಿಟ್ಟು ಕೊಂಡಿದ್ನಂತೆ.

ಹೀಗಾಗಿ ಈ ವಿಚಾರ ಪತ್ನಿಗೆ ಗೊತ್ತಾಗಿದ್ದು ಹಲವು ಬಾರಿ ಇದೇ ವಿಚಾರವಾಗಿ ಗಂಡ ಹೆಂಡತಿ ನಡುವೆ ಗಲಾಟೆ ನಡೆದಿತ್ತಂತೆ. ಅಲ್ಲದೆ ಇದನ್ನ ಮನಸಿನಲ್ಲಿಟ್ಟುಕೊಂಡಿದ್ದ ಗಂಡ, ತನ್ನ ಪತ್ನಿಗೆ ಪದೇ ಪದೇ ತವರು ಮನೆಯಿಂದ ಹಣ ತರುವಂತೆ ವರದಕ್ಷಿಣೆ ಕಿರುಕುಳ ನೀಡ್ತಿದ್ದ ಅಂತಾ ಕುಟುಂಬಸ್ಥರು ಆರೋಪಿಸಿದ್ದಾರೆ. ಜೊತೆಗೆ ಇದೇ ರೀತಿ ಕಳೆದ ರಾತ್ರಿ ಸಹ ಗಂಡ ಜಯಂತಿಗೆ ಕಿರುಕುಳ ನೀಡಿ ಕೊಲೆ ಮಾಡಿದ್ದು ಕೊಲೆಯ ನಂತರ ಪತ್ನಿಯ ಮೃತದೇಹವನ್ನ ಸರ್ಕಾರಿ ಆಸ್ಪತ್ರೆಗೆ ತಂದು ಹಾಕಿ ಎಸ್ಕೇಪ್ ಆಗಿದ್ದಾನೆ ಅಂತಾ ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ.

ಕಳೆದ ಒಂದು ವರ್ಷದಿಂದ ಅನೈತಿಕ ಸಂಬಂಧ ವಿಚಾರವಾಗಿ ಗಂಡ ಹೆಂಡತಿ ನಡುವೆ ಗಲಾಟೆ ನಡೆಯುತ್ತಿದ್ದು ಹಲವು ಬಾರಿ ಎರಡು ಕುಟುಂಬಗಳು ಕೂತು ರಾಜಿ ಪಂಚಾಯತಿ ಮಾಡಿದ್ರಂತೆ. ಆದ್ರೆ ಎಷ್ಟೇ ಸಂಧಾನ ಮಾಡಿದರೂ ಸರಿಹೋಗದ ಗಂಡ ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗುತ್ತೆ ಅಂತಾ ಗಂಡನೆ ಕೊಲೆ ಮಾಡಿ ಆಸ್ಪತ್ರೆಗೆ ತಂದು ಹಾಕಿ ಹೋಗಿದ್ದಾನೆ ಅಂತ ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ. ಇನ್ನು ಮೃತದೇಹ ನೋಡಲು ಬಂದ ಕುಟುಂಬಸ್ಥರ ಆಕ್ರಂದನ ಆಸ್ವತ್ರೆಯ ಮುಂದೆ ಮುಗಿಲು ಮುಟ್ಟಿದ್ದು ನೋಡುಗರ ಕಣ್ಣಲ್ಲಿಯೂ ಕಣ್ಣೀರು ತರಿಸುವಂತಿತ್ತು.

ಒಟ್ಟಾರೆ ನೆಮ್ಮದಿಯಾಗಿದ್ದ ಕುಟುಂಬದಲ್ಲಿ ಎದ್ದ ಅನೈತಿಕ ಸಂಬಂಧದ ಬಿರುಗಾಳಿ ಪತ್ನಿಯನ್ನೆ ಬಲಿ ಪಡೆದುಕೊಂಡಿದ್ದು ನಿಜಕ್ಕೂ ದುರಂತ. ಇನ್ನು ಈ ಸಂಬಂಧ ವಿಜಯಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದು ತನಿಖೆಯ ನಂತರ ಗೃಹಿಣಿಯದ್ದು ಕೊಲೆಯೋ ಅಥವಾ ಆತ್ಮಹತ್ಯೆಯೋ ಅನ್ನೋದು ಗೊತ್ತಾಗಬೇಕಿದೆ

error: Content is protected !!