ಬೆಂಗಳೂರು: ಪತ್ನಿಯು ಮೊಬೈಲ್ನಲ್ಲಿ ಹೆಚ್ಚು ಮಾತನಾಡುತ್ತಿದ್ದಿದ್ದಕ್ಕೆ ಆಕೆಯ ಶೀಲಶಂಕಿಸಿ, ಗಂಡ ಕೈಲಾಶ್ ಚಂದ ಎಂಬುವವನು 2018ರ ಜೂನ್ನಲ್ಲಿ ಹಾಸಿಗೆ ದಿಬ್ಬಿನಿಂದ ಉಸಿರುಗಟ್ಟಿಸಿ ಪತ್ನಿ ಮಾಲತಿಯನ್ನ ಕೊಲೆ ಮಾಡಿದ್ದನು. ನಂತರ ಶವದ ಮೇಲೆ ಬೆಡ್ಶೀಟ್ ಹೊದಿಸಿ ಸಾಕ್ಷ್ಯನಾಶಪಡಿಸಲು ಯತ್ನ ಮಾಡಿದ್ದ.
ಈ ಕುರಿತು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸತತ 5 ವರ್ಷ ವಾದ-ವಿವಾದ ನಂತರ ಅಪರಾಧಿಗೆ ಬೆಂಗಳೂರು ನಗರದ ಸಿಸಿಹೆಚ್ 46 ನ್ಯಾಯಾಲಯ 7 ವರ್ಷ ಜೈಲುಶಿಕ್ಷೆ ಜೊತೆಗೆ ಜೀವಾವಧಿ ಶಿಕ್ಷೆ ವಿಧಿಸಿದೆ.