ಕೂಗು ನಿಮ್ಮದು ಧ್ವನಿ ನಮ್ಮದು

ಮಹಿಳೆಯರ ಸೀರೆ ಎಳದಿದ್ದಕ್ಕೆ ಬಿತ್ತು ಧರ್ಮದೇಟು

ರಾಯಚೂರು: ಮಹಿಳೆಯರ ಸೀರೆಯನ್ನು ಎಳೆದು ಕಿರುಕುಳ ನೀಡುತ್ತಿದ್ದವನಿಗೆ ಸ್ಥಳೀಯರು ಹಿಗ್ಗಾ ಮುಗ್ಗಾ ಬಾರಿಸಿದ್ದಾರೆ. ಈ ಘಟನೆಯು ರಾಯಚೂರಿನಲ್ಲಿ ಸಂಭವಿಸಿದೆ. ಇನ್ನೂ
ನಗರದ ಆಶಾಪುರ ರಸ್ತೆಯಲ್ಲಿ ಅಪರಿಚಿತ ವ್ಯಕ್ತಿಯೋರ್ವನು ರಸ್ತೆಯಲ್ಲಿ ಓಡಾಡುತ್ತಿರುವ ಮಹಿಳೆಯರ ಸೀರೆಯನ್ನು ಎಳೆದು ಕಿರುಕುಳವನ್ನು ಕೋಡುತ್ತಿದ್ದ.

ಇದನ್ನ ನೋಡಿರುವ ಸ್ಥಳೀಯರು ಆ ವ್ಯಕ್ತಿಯನ್ನ ಹಿಡಿದು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಆಮೇಲೆ ಮರಕ್ಕೆ ಕಟ್ಟಿ ಹಾಕಿದ್ದಾರೆ. ಇನ್ನೂ ಹಿಂದೆ ಎಂದೂ ಈ ಪ್ರದೇಶದಲ್ಲಿ ಕಾಣಿಸಿಕೊಳ್ಳದಿರುವ ಈ ವ್ಯಕ್ತಿಯು ಓಡಾಡುತ್ತಿರುವ ಮಹಿಳೆಯರ ಹಿಂದೆ ಹಿಂದೆಯೇ ಹೋಗಿ ಅವರ ಸೀರೆಯ ಸೇರಗನ್ನು ಎಳೆಯುತ್ತಿದ್ದನು. ಆಗ ಆ ಮಹಿಳೆಯರು ಭಯದಿಂದ ಓಡಿ ಹೋಗುತ್ತಿದ್ರು. ಇದನ್ನೆ ಆ ಮುಂದುವರೆಸಿದ ಆ ವ್ಯಕ್ತಿಯನ್ನು ಅಲ್ಲೆ ಇದ್ದ ಸ್ಥಳೀಯರು ಹಿಡಿದು ಗಿಡಕ್ಕೆ ಕಟ್ಟಿ ಹಾಕಿ ಚೆನ್ನಾಗಿ ಹೋಡೆದ್ದಿದ್ದಾರೆ. ತದನಂತರ ಆ ವ್ಯಕ್ತಿಯನ್ನು ನಗರದ ಪಶ್ಚಿಮ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.

error: Content is protected !!