ಬಿಸಿಲಿಗೆ ಒಣಹಾಕಿದ ಸೀರೆ ಪಕ್ಕದ ಮನೆಯವರೆಗೆ ಹಾರಿಬಿದ್ದಿದ್ದಕ್ಕೆ ಮಹಿಳೆಯನ್ನು ಥಳಿಸಿದ ಘಟನೆಯೊಂದು ವರದಿಯಾಗಿದೆ. ಪಕ್ಕದ ಮನೆಯ ಮಹಿಳೆಯ ಸೀರೆ ತಮ್ಮ ಮನೆ ಅಂಗಳಕ್ಕೆ ಬಂದಿದ್ದಕ್ಕೆ ಮಹಿಳೆಯ ಮುಖಕ್ಕೆ ಥಳಿಸಲಾಗಿದೆ. ಇದರಿಂದ ಮಹಿಳೆಯ ಮೂಗು ಒಡೆದಿದೆ, ಅಲ್ಲದೇ ಆಕೆಯ ಗಂಡನಿಗೂ ಹಿಗ್ಗಾಮುಗ್ಗಾ ಥಳಿಸಲಾಗಿದೆ.
ಗುಜರಾತ್ನ ಅಹ್ಮದಾಬಾದ್ನ 36 ವರ್ಷದ ಮಹಿಳೆಯೇ ಹೀಗೆ ಥಳಿಸಲ್ಪಟ್ಟ ಮಹಿಳೆ
ಊಟ ಮಾಡಿ ಮಲಗಿದ್ದ ದಂಪತಿಯನ್ನು ಪಕ್ಕದ ಮನೆಯವರು ಎಬ್ಬಿಸಿದ್ದಾರೆ. ನೀವು ಒಣಗಿಸಿದ ಸೀರೆ ಅರ್ಧ ರಸ್ತೆಯಲ್ಲಿದ್ದು ಇನ್ನರ್ಧ ತಮ್ಮ ಮನೆಯ ಅಂಗಳದಲ್ಲಿದೆ ಎಂದು ಗಲಾಟೆ ಮಾಡಿದ್ದಾರೆ. ಸಂತೃಸ್ತ ಮಹಿಳೆ ಸೀರೆಯನ್ನು ಎತ್ತಿಕೊಂಡು ಬರಲು ಹೋದಾಗ ಥಳಿಸಲಾಗಿದೆ. ಗಾಳಿಗೆ ಹಾರಿ ಸೀರೆ ನಿಮ್ಮ ಮನೆ ಅಂಗಳಕ್ಕೆ ಬಂದಿದೆ ಎಂದು ಹೇಳಿದರೂ ಪಕ್ಕದ ಮನೆಯವರು ಕ್ಯಾರೇ ಅನ್ನದೇ ಮಹಿಳೆಯ ಮೂಗನ್ನು ನಜ್ಜುಗುಜ್ಜು ಮಾಡಿದ್ದಾರೆ. ಅಲ್ಲದೇ ಸೀರೆಯ ಪ್ರಕರಣಕ್ಕೆ ಈ ದಂಪತಿಗೆ ಪಕ್ಕದ ಮನೆಯ ದಂಪತಿ ಕೊಲೆ ಮಾಡುವುದಾಗಿಯೂ ಬೆದರಿಕೆ ಹಾಕಿದ್ದಾರಂತೆ. ಸದ್ಯ ಈ ಕುರಿತು ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.