ಲೂಧಿಯಾನ: ತನಗೆ ಇಷ್ಟವಾಗದ ತರಕಾರಿಯ ಅಡಿಗೆ ಮಾಡಿದ್ದಾಳೆ ಎಂದು ಮಗನೊಬ್ಬ ತನ್ನ ತಾಯಿಯನ್ನೇ ಮನೆಯ ಮೊದಲ ಮಹಡಿಯಿಂದ ತಳ್ಳಿದ ಆಘಾತಕಾರಿ ಘಟನೆ ನಡೆದಿದೆ. ಪಂಜಾಬ್ನ ಜಿಲ್ಲಾ ಕೇಂದ್ರ ಪಟ್ಟಣವಾದ ಲೂಧಿಯಾನದ ನ್ಯೂ ಅಶೋಕ್ ನಗರ ಪ್ರದೇಶದಲ್ಲೇ 26 ವರ್ಷದ ವ್ಯಕ್ತಿಯೊಬ್ಬ ತನ್ನ ತಾಯಿಯನ್ನು ಮನೆಯ ಮೊದಲ ಮಹಡಿಯಿಂದ ತಳ್ಳಿದ ಘಟನೆ ನಡೆದಿದೆ. ಮೊದಲ ಮಹಡಿಯಿಂದ ತಾಯಿಯನ್ನು ತಳ್ಳುವ ಮುನ್ನ ಸ್ವಂತ ಮಗನೇ ದೊಣ್ಣೆಯಿಂದ ಥಳಿಸಿದ್ದಾನೆ. ಆತನ ತಂದೆ ಪತ್ನಿಯ ರಕ್ಷಣೆಗೆ ಮುಂದಾದಾಗ ಮಗ ಅಪ್ಪನಿಗೂ ದೊಣ್ಣೆಯಿಂದ ಥಳಿಸಿದ್ದಾನೆ. ಸೋಮವಾರ ಈ ಘಟನೆ ನಡೆದಿದ್ದು, ಚರಂಜಿತ್ ಕೌರ್ (65) ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ.
ಮಗ ಸುರಿಂದರ್ಗೆ ತನ್ನ ತಾಯಿ ಚರಂಜಿತ್ ಕೌರ್ ಮಾಡಿದ ಸೋರೆಕಾಯಿ ಸಾರು ಇಷ್ಟ ಆಗಿರಲಿಲ್ಲ. ಮೊದಲೇ ಆತನಿಗೆ ಬೇಗ ಸಿಟ್ಟು ಬರುತ್ತಿತ್ತು. ಅಲ್ಲದೇ ನಿರುದ್ಯೋಗಿಯೂ ಆಗಿದ್ದ ಸುರಿಂದರ್ಗೆ ಮಾಡಲು ಬೇರೇನೂ ಕೆಲಸ ಇರಲಿಲ್ಲ. ಬೇರೆ ಅಡುಗೆ ಮಾಡಲ್ಲ ಎಂದ ತಾಯಿ ತನಗಾಗಿ ಬೇರೆ ಏನಾದರೂ ಅಡುಗೆ ಮಾಡಲು ಅವನು ತನ್ನ ತಾಯಿಯನ್ನು ಕೇಳಿದ್ದ. ಆದರೆ ಚರಂಜಿತ್ ಕೌರ್ ಮಗನ ಬೇಡಿಕೆಯನ್ನು ನಿರಾಕರಿಸಿದಳು. ಇದರಿಂದ ಸಿಟ್ಟಿಗೆದ್ದ ಸುರೀಂದರ್ ಕೋಪದಿಂದ ತನ್ನ ತಾಯಿಯನ್ನು ಹೊಡೆಯಲು ಪ್ರಾರಂಭಿಸಿದನು.
ಸುರೀಂದರ್ ಅವರ ತಂದೆ ಗುರ್ನಾಮ್ ಸಿಂಗ್ ಅವರ ಪತ್ನಿಯ ರಕ್ಷಣೆಗೆ ಬಂದಾಗ ಅವರನ್ನೂ ಥಳಿಸಿದ್ದಾನೆ. ನಂತರ ತಾಯಿ ತನ್ನನ್ನು ರಕ್ಷಿಸಿಕೊಳ್ಳಲು ಮೇಲಕ್ಕೆ ಧಾವಿಸಿದರು. ಆದರೆ ಸುರೀಂದರ್ ಅವಳನ್ನು ಹಿಂಬಾಲಿಸಿದ. ಕೋಪದ ವರ್ತನೆಯಿಂದ ಕೆಲಸವೂ ಸಿಕ್ಕಿರಲಿಲ್ಲ
ಆರೋಪಿ ಮಗ ಆಕೆಯನ್ನು ಮನೆಯ ಮೊದಲ ಮಹಡಿಯಿಂದ ತಳ್ಳಿದ್ದಾನೆ. ಆಕೆಗೆ ತೀವ್ರ ಗಾಯಗಳಾಗಿದ್ದು, ಕೂಡಲೇ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆ ಮಂಗಳವಾರ ಮೃತಪಟ್ಟಿದ್ದಾಳೆ ಎಂದು ಅಮ್ರಿಕ್ ಸಿಂಗ್ ಹೇಳಿದ್ದಾರೆ.
ಸುರಿಂದರ್ನ ಕೋಪದ ವರ್ತನೆಯಿಂದಾಗಿ ಸ್ಥಿರವಾದ ಕೆಲಸ ಸಿಗುತ್ತಿಲ್ಲ ಎಂದು ಸಂಬಂಧಿ ಆರೋಪಿಸಿದ್ದಾರೆ. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದು, ಸುರೀಂದರ್ ಕಿರಿಯ ಮಗನಾಗಿದ್ದಾನೆ. ಸದ್ಯ ಇದೇ ಕಿರಿಯ ಮಗ ಕೇವಲ ಸೋರೆಕಾಯಿ ಸಾರಿಗೆ ಸಿಟ್ಟು ಬಂದು ತನ್ನ ತಾಯಿಯನ್ನೇ ಮೊದಲ ಮಹಡಿಯಿಂದ ನೂಕಿದ್ದಾನೆ.