ಮಡಿಕೇರಿ: ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಸಂಬಂಧಿಕರ ಮನೆಗೆ ಹೋಗಿದ್ದ ವಿದ್ಯಾರ್ಥಿಯೋರ್ವ ಸ್ನಾನಕ್ಕೆ ಎಂದು ಹೊಳೆಗೆ ಇಳಿದ ವೇಳೆ ಸುಳಿಗೆ ಸಿಲುಕಿ ಮೃತಪಟ್ಟ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಗ್ರಾಮದಲ್ಲಿ ಸಂಭವಿಸಿದೆ.
ಪರ್ಹಾನ್ (12) ಮೃತಪಟ್ಟ ವಿದ್ಯಾರ್ಥಿ ರಂಜಾನ್ ಹಬ್ಬಕ್ಕೆಂದು ಪರ್ಹಾನ್ ಕುಶಾಲನಗರ ಸಮೀಪದ ಬೈಲ್ ಕೊಪ್ಪದಿಂದ ಶನಿವಾರಸಂತೆಯಲ್ಲಿರುವ ಅಜ್ಜಿಯ ಮನೆಗೆ ಬಂದಿದ್ದ. ಮಾವನ ಮಗನೊಂದಿಗೆ ಶನಿವಾರಸಂತೆಯ ಹೆಮ್ಮನೆಯಲ್ಲಿರುವ ಹೊಳೆಯಲ್ಲಿ ಈಜಲು ತೆರಳಿದ್ದರು.