16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ಗೆ ತೆರೆ ಬಿದ್ದಿದೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ರಣರೋಚಕ ಕದನದಲ್ಲಿ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ರೋಚಕ ಜಯ ಸಾಧಿಸಿದೆ. ಈ ಮೂಲಕ ಸಿಎಸ್ಕೆ ಐದನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಡಕೌರ್ತ್ ಲುಯೂಸ್ ನಿಯಮದ ಅನ್ವಯ ಚೆನ್ನೈ ತಂಡ 5 ವಿಕೆಟ್ಗಳ ಗೆಲುವು ಕಂಡಿತು. ಕೊನೆಯ 2 ಎಸೆತದಲ್ಲಿ ಗೆಲ್ಲಲು 10 ರನ್ ಬೇಕಿದ್ದಾಗ ರವೀಂದ್ರ ಜಡೇಜಾ 1 ಫೋರ್, ಸಿಕ್ಸರ್ ಸಿಡಿಸಿ ತಂಡಕ್ಕೆ ಗೆಲುವು ತಂದಿಟ್ಟರು.
ಇದೀಗ ಚಾಂಪಿಯನ್ ಆದ ಚೆನ್ನೈ ತಂಡಕ್ಕೆ ಬರೋಬ್ಬರಿ 20 ಕೋಟಿ ರೂ. ನೀಡಲಾಗಿದೆ. ರನ್ನರ್ ಅಪ್ ಆದ ಗುಜರಾತ್ ಟೈಟಾನ್ಸ್ ತಂಡ 12.5 ಕೋಟಿ ರೂ. ಬಹುಮಾನ ಪಡೆದುಕೊಂಡಿದೆ. 17 ಪಂದ್ಯಗಳಲ್ಲಿ 890 ರನ್ ಬಾರಿಸಿ ಶುಭ್ಮನ್ ಗಿಲ್ ಆರೆಂಜ್ ಕ್ಯಾಪ್ ಪಡೆದುಕೊಂಡಿದ್ದು 10 ಲಕ್ಷ ರೂ. ಬಾಚಿಕೊಂಡಿದ್ದಾರೆ. ಮೊಹಮ್ಮದ್ ಶಮಿ 17 ಪಂದ್ಯಗಳಿಂದ 28 ವಿಕೆಟ್ ಕಿತ್ತು ಪರ್ಪಲ್ ಕ್ಯಾಪ್ ತಮ್ಮದಾಗಿಸಿ 10 ಲಕ್ಷ ಪಡೆದುಕೊಂಡಿದ್ದಾರೆ.
ಅಜಿಂಕ್ಯಾ ರಹಾನೆ ಎಲೆಕ್ಟ್ರಿಕ್ ಸ್ಟ್ರೈಕರ್ ಆಫ್ ದಿ ಫೈನಲ್ ಪಡೆದುಕೊಂಡಿದ್ದು 1 ಲಕ್ಷ ರೂ. ತಮ್ಮದಾಗಿಸಿದ್ದಾರೆ. ಗೇಮ್ ಚೇಂಜರ್ ಆಫ್ ದಿ ಫೈನಲ್ ಸಾಯಿ ಸುದರ್ಶನ್ (1 ಲಕ್ಷ), ಮೋಸ್ಟ್ ವ್ಯಾಲ್ಯುವೇಬಲ್ ಪ್ಲೇಯರ್ ಆಫ್ ದಿ ಫೈನಲ್ ಸಾಯಿ ಸುದರ್ಶನ್ (1 ಲಕ್ಷ). ಉಳಿದಂತೆ ಅತ್ಯಂತ ಮೌಲ್ಯಯುತ ಆಟಗಾರ ಶುಭ್ಮನ್ ಗಿಲ್ (12 ಲಕ್ಷ), ಫೇರ್ ಪ್ಲೇ ಅವಾರ್ಡ್- ಡೆಲ್ಲಿ ಕ್ಯಾಪಿಟಲ್ಸ್, ಉದಯೋನ್ಮುಖ ಆಟಗಾರ ಯಶಸ್ವಿ ಜೈಸ್ವಾಲ್ (20 ಲಕ್ಷ), ಈ ಆವೃತ್ತಿಯ ಬೆಸ್ಟ್ ಕ್ಯಾಚ್ ಅವಾರ್ಡ್ ರಶೀದ್ ಖಾನ್ (10 ಲಕ್ಷ) ಪಡೆದುಕೊಂಡಿದ್ದಾರೆ.
ಅಂತೆಯೆ ಸೂಪರ್ ಸ್ಟ್ರೈಕರ್ ಅವಾರ್ಡ್ ಗ್ಲೇನ್ ಮ್ಯಾಕ್ಸ್ವೆಲ್ (10 ಲಕ್ಷ), ಪ್ಲೇಯರ್ ಆಫ್ ದಿ ಮ್ಯಾಚ್ ಡೆವೋನ್ ಕಾನ್ವೆ (1 ಲಕ್ಷ), ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರ ಫಾಫ್ ಡು ಪ್ಲೆಸಿಸ್ (12 ಲಕ್ಷ).