ಕೂಗು ನಿಮ್ಮದು ಧ್ವನಿ ನಮ್ಮದು

ಕಾಂಗ್ರೆಸ್ ಗೆ ಆಘಾತ, ಎಸ್ ಎಂ ಕೃಷ್ಣ ಅಣ್ಣನ ಮಗ ಗುರುಚರಣ್ ಜೆಡಿಎಸ್ ಸೇರ್ಪಡೆ, ಮದ್ದೂರು ಟಿಕೆಟ್ ಸಿಗದ ಕಾರಣ ಬಂಡಾಯ

ಮಂಡ್ಯ: ಜಿಲ್ಲೆಯ ಮದ್ದೂರು ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಆಘಾತ ಎದುರಾಗಿದೆ. ಟಿಕೆಟ್ ಆಕಾಂಕ್ಷಿ ಮತ್ತು ಇಲ್ಲಿನ ಪ್ರಭಾವಿ ನಾಯಕರಾಗಿದ್ದ ಎಸ್ ಗುರುಚರಣ್ ತಮ್ಮ ಬೆಂಬಲಿಗರೊಂದಿಗೆ ಪಕ್ಷ ತೊರೆದು ಜೆಡಿಎಸ್ ಸೇರಿದ್ದಾರೆ. ಗುರುಚರಣ್ ರಾಜ್ಯದ ಹಿರಿಯ ಮುತ್ಸದ್ದಿ ಮತ್ತು ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ಸಹೋದರನ ಪುತ್ರ.

ಕಾಂಗ್ರೆಸ್ ವರಿಷ್ಠರು ತಮ್ಮ ಬದಲಿಗೆ ಕದಲೂರು ಉದಯ್ ಗೆ ಟಿಕೆಟ್ ನೀಡಿದ್ದರಿಂದ ಅಸಮಾಧಾನಗೊಂಡಿರುವ ಗುರುಚರಣ್ ಇಂದು ಜೆಡಿಎಸ್ ಪಕ್ಷ ಸೇರಿದರು. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್ ಡಿ ಕುಮಾರಸ್ವಾಮಿ ಮದ್ದೂರು ಸೋಮನಹಳ್ಳಿ ಗ್ರಾಮದಲ್ಲಿರುವ ಗುರುಚರಣ್ ಮನೆಗೆ ಭೇಟಿ ನೀಡಿ ಗುರುಚರಣ್ ರನ್ನು ಪಕ್ಷಕ್ಕೆ ಬರಮಾಡಿಕೊಂಡರು.

error: Content is protected !!