ಬೆಂಗಳೂರು: ಬಾಕಿ ಉಳಿದಿದ್ದ 58 ಕ್ಷೇತ್ರಗಳ ಪೈಕಿ 43 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಕಾಂಗ್ರೆಸ್ ಮೂರನೇ ಪಟ್ಟಿಯಲ್ಲಿ ಬಿಡುಗಡೆ ಮಾಡಿದೆ. ಇನ್ನು 15 ಕ್ಷೇತ್ರಗಳ ಅಭ್ಯರ್ಥಿ ಹೆಸರು ಘೋಷಣೆ ಆಗಬೇಕಿದೆ.ಈ ಪೈಕಿ ಹರಿಹರ, ಪುಲಕೇಶಿ ನಗರ, ಶಿಡ್ಲಘಟ್ಟ ಹಾಲಿ ಶಾಸಕರ ಕ್ಷೇತ್ರಗಳ ಹೆಸರು ಘೋಷಣೆ ಆಗಿಲ್ಲ.
ಘೋಷಣೆ ಆಗದೆ ಬಾಕಿ ಉಳಿದ ಕ್ಷೇತ್ರಗಳು
1. ಪುಲಕೇಶಿ ನಗರ
- ಸಿವಿ ರಾಮನ್ ನಗರ
- ಮುಳಬಾಗಿಲು
- ರಾಯಚೂರು ಸಿಟಿ
- ಶಿಗ್ಗಾoವಿ
6.ಶ್ರವಣಬೆಳಗೊಳ
- ಅರಕಲಗೂಡು
- ಲಿಂಗಸೂರು
- ಹುಬ್ಬಳ್ಳಿ ಧಾರವಾಡ ಸೆಂಟ್ರಲ್
- ಹುಬ್ಬಳ್ಳಿ ಧಾರವಾಡ ವೆಸ್ಟ್
- ಮಂಗಳೂರು ಉತ್ತರ
- ಶಿಡ್ಲಘಟ್ಟ
- ಚಿಕ್ಕಮಗಳೂರು
- ಕೆ.ಆರ್ ಪುರಂ
- ಹರಿಹರ
ಶಿಕಾರಿಪುರಕ್ಕೆ ಗೋಣಿ ಮಾಲತೇಶ್ ಗೆ ಟಿಕೆಟ್
ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಗೋಣಿ ಮಾಲತೇಶ್ ಗೆ ಟಿಕೆಟ್ ನೀಡಲಾಗಿದೆ. ಈ ಕ್ಷೇತ್ರದಲ್ಲಿ ನಾಗರಾಜ್ ಗೌಡ ಹಾಗೂ ಗೋಣಿ ಮಾಲತೇಶ್ ನಡುವೆ ಪೈಪೋಟಿ ಇತ್ತು. ಕೊನೆಗೂ ಗೋಣಿ ಮಾಲತೇಶ್ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.