ಕೂಗು ನಿಮ್ಮದು ಧ್ವನಿ ನಮ್ಮದು

ಬೆಳಗಾವಿಯಲ್ಲಿ ಆಮ್ಲಜನಕ ಘಟಕದ ಕಾಮಗಾರಿಗೆ ಶಂಖುಸ್ಥಾಪನೆ ಮಾಡಿದ ಶಾಸಕರು

ಬೆಳಗಾವಿ: ಕೋವಿಡ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದಂತೆ ಆಮ್ಲಜನಕದ ಕೊರತೆಯು ತೀವ್ರವಾಗುತ್ತಿರುವುದರ ಬಗ್ಗೆ ಗಂಭೀರವಾಗಿ ಪರಿಗಣಿಸಿದ ಶಾಸಕ ಅಭಯ ಪಾಟೀಲ ಸುಮಾರು 15 ದಿನಗಳ ಹಿಂದೆಯೇ ಎಲ್&ಟಿ ಕಂಪನಿಯ ಪ್ರತಿನಿಗಳೊಂದಿಗೆ ಚರ್ಚಿಸಿ, ಬೆಳಗಾವಿಯಲ್ಲಿ ಒಂದು ಆಮ್ಲಜನಕ ತಯಾರಿಕಾ ಘಟಕವನ್ನು ಸ್ಥಾಪಿಸುವಂತೆ ವಿನಂತಿಕೊಂಡಿರುವುದು ಇಂದು ಫಲಪ್ರದವಾಗಿದೆ.

ಈ ಹಿನ್ನಲೆಯಲ್ಲಿ ಬೆಳಗಾವಿ ದಕ್ಷಿಣ ಮತ್ತು ಉತ್ತರ ಶಾಸಕರು ಮೊನ್ನೆಯಷ್ಟೇ ಆಮ್ಲಜನಕ ತಯಾರಿಕಾ ಘಟಕದ ಸ್ಥಾಪನೆಗೆ ಸ್ಥಳ ಪರಿಶೀಲನೆ ಮಾಡಿದ್ದರು. ಸ್ಥಳ ಪರಿಶೀಲನೆ ಬೆನ್ನಲ್ಲೇ ಇಂದು ಕಾಮಗಾರಿಯ ಶಂಖು ಸ್ಥಾಪನೆ ಮಾಡಿದ್ದಾರೆ. ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿ ಪ್ರತಿ ನಿಮಿಷಕ್ಕೆ 700 ಲೀಟರ್ ಆಮ್ಲಜನಕವನ್ನು ಉತ್ಪಾದಿಸುವ ಆಧುನಿಕ ತಂತ್ರಜ್ಞಾನವನ್ನು ಹೊಂದಿರುವ ಘಟಕಕ್ಕೆ ಇಂದು ಶಾಸಕರುಗಳಾದ ಅಭಯ ಪಾಟೀಲ ಹಾಗೂ ಅನೀಲ‌ ಬೆನಕೆ ಒಟ್ಟಾಗಿ ಶಂಖುಸ್ಥಾಪನೆ ನೆರವೇರಿಸಿದ್ದಾರೆ.

ಎಲ್&ಟಿ ಕಂಪನಿಯ ವತಿಯಿಂದ ನಿರ್ಮಾಣಗೊಳ್ಳುವ ಈ ಘಟಕವು ಸುಮಾರು 60.00 ಲಕ್ಷ ರೂಪಾಯಿಗಳ ಅಂದಾಜು ಮೊತ್ತವಾಗಿದ್ದು, 50 ಚದರ‌ ಅಡಿಯ ಜಾಗೆಯಲ್ಲಿ ಈ ಯಂತ್ರವನ್ನು ಅಳವಡಿಸಲಾಗುವುದು. ಇದರಿಂದ ಸುಮಾರು 50 ರಿಂದ 60 ಹಾಸಿಗೆಗಳಿಗೆ ನಿರಂತರ ಆಮ್ಲಜನಕ ಸರಬರಾಜು ಮಾಡಬಹುದಾಗಿದೆ ಎಂದು ಶಾಸಕ ಅಭಯ ಪಾಟೀಲ ಮಾಹಿತಿ ನೀಡಿದ್ದು, ಜೂನ್ 10 ರ ವೇಳೆಗೆ ಕಾಮಗಾರಿಯನ್ನು ಸಂಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚನೆಯನ್ನು ನೀಡಿದ್ದಾರೆ.

ಬೆಳಗಾವಿಯಲ್ಲಿ ವಿನೂತನ ವಿಚಾರಗಳ ವಿನಿಮಯ ಹಾಗೂ ಅಭಿವೃದ್ಧಿಗೆ ಒತ್ತು ನೀಡುತ್ತಿರುವ ಶಾಸಕ ಅಭಯ ಪಾಟೀಲ್, ಅನೇಕ ಸಮಾಜಮುಖಿ ಕೆಲಸವನ್ನು ಮಾಡುತ್ತ ಬಂದಿದ್ದು, ಅದಕ್ಕೆ ಪೂರಕ ಎನ್ನುವಂತೆ ಎಲ್&ಟಿ ಎಂಬ ಖಾಸಗಿ ಕಂಪನಿಯ ವತಿಯಿಂದ ಉಚಿತವಾಗಿ ಬೆಳಗಾವಿಯ ಸರಕಾರಿ ಆಸ್ಪತ್ರೆಯಲ್ಲಿ ನಿಮಾರ್ಣಗೊಳ್ಳುತ್ತಿರುವ ಕರ್ನಾಟಕ ರಾಜ್ಯದಲ್ಲಿನ ಪ್ರಥಮ ಘಟಕ ಇದಾಗಿದ್ದು, ಕೇವಲ 20 ದಿನಗಳಲ್ಲಿಯೇ ಕಾಮಗಾರಿ ಸಂಪೂರ್ಣಗೊಂಡು ಕಾರ್ಯಾರಂಭ ಮಾಡುವುದು ಕೂಡಾ ಮತ್ತೊಂದು ವಿಶೇಷವಾಗಿದೆ.

error: Content is protected !!