ಕೂಗು ನಿಮ್ಮದು ಧ್ವನಿ ನಮ್ಮದು

ಸಾಮಾನ್ಯ ಜ್ವರ ಬಂದ್ರೆ ಹೀಗೊಮ್ಮೆ, ಮಾಡಿ ನೋಡಿ ತಕ್ಷಣವೇ ಪರಿಹಾರ

ಸಾಮಾನ್ಯ ಜ್ವರ:
ಈ ಜ್ವರದಿಂದ ದೇಹದ ಉಷ್ಣತೆ ಸಾಮಾನ್ಯ ಮಟ್ಟಕ್ಕಿಂತ ಹೆಚ್ಚಾಗುತ್ತದೆ. ಸಾಮಾನ್ಯವಾಗಿ ಅಶುದ್ಧ ಆಹಾರ-ಪಾನಿಗಳ ಸೇವನೆ, ಅಧಿಕ ಪ್ರಮಾಣದಲ್ಲಿ ಆಹಾರ ಸೇವನೆ, ಪ್ರಕೃತಿ ವಿರುದ್ಧವಾದ ಆಹಾರ ಸೇವನೆ, ಉಷ್ಣದ ಕಾರಣದಿಂದ ಅಥವಾ ಅನ್ನಾಶಯದಲ್ಲಿ ವಾತ, ಪಿತ್ತ ಮತ್ತು ಕಫಾದಿಗಳು ಪ್ರಕೋಪಿತವಾಗುವುದರಿಂದ ಜ್ವರ ಬರುತ್ತದೆ. ಜ್ವರ ಬಂದಾಗ ದಣಿವು ದೇಹವನ್ನು ಆವರಿಸುವುದು; ನಾಲಿಗೆಯ ರುಚಿ ಕೆಡುತ್ತದೆ. ದೇಹದಲ್ಲಿ ಉಷ್ಣತೆ ಹೆಚ್ಚುತ್ತದೆ. ಆಹಾರ- ಪಾನೀಯಗಳು ಸೇರುವುದಿಲ್ಲ. ಮನಸ್ಸಿನಲ್ಲಿ ವ್ಯಾಕುಲತೆ ತುಂಬಿ, ತಲೆ ಭಾರವಾಗುತ್ತದೆ. ಯಾವುದೇ ಕೆಲಸ ಮಾಡಲು ಮನಸ್ಸಾಗುವುದಿಲ್ಲ. ಸದಾಕಾಲ ಹಾಸಿಗೆಯಲ್ಲಿ ಮಲಗಿರಬೇಕೆಂದು ಎನಿಸುತ್ತದೆ. ಇಂಥ ಸ್ಥಿತಿಯಲ್ಲಿ ಜೇನುತುಪ್ಪದಿಂದ ಈ ಕೆಳಗಿನ ಉಪಚಾರಗಳನ್ನು ಮಾಡಿ.

೧) ದ್ರಾಕ್ಷಿಯ ರಸದಲ್ಲಿ ಅರ್ಧ ಚಮಚ ಜೇನುತುಪ್ಪ ಸೇರಿಸಿ ಸೇವಿಸಿ.
೨) ಸ್ವಲ್ಪ ಬೇವಿನ ಮರದ ತೊಗಟೆಯ ಚೂರ್ಣದಿಂದ ಕಷಾಯವನ್ನು ತಯಾರಿಸಿ. ನಂತರ ಅದನ್ನು ಸೋಸಿ, ಜೇನುತುಪ್ಪ ಬೆರೆಸಿ ಬಿಸಿ-ಬಿಸಿಯಾಗಿಯೇ ಸೇವಿಸಿ.
೩) ತುಳಸಿ ಮತ್ತು ಕರಿಮೆಣಸಿನ ಕಷಾಯವನ್ನು ಮಾಡಿ, ಅದರಲ್ಲಿ ಜೇನುತುಪ್ಪ ಬೆರೆಸಿ ಸೇವಿಸಿ.
೪) ನಿಂಬೆರಸ ಮತ್ತು ಜೇನು ತುಪ್ಪ ಸೇರಿಸಿದ ಬೆಚ್ಚನೆಯ ನೀರನ್ನು ದಿನದಲ್ಲಿ 4-5 ಸಲ ಕುಡಿಸಿ.
೫)ಮೂರು ಗ್ರಾಮ್ ಅರಳಿ ವೃಕ್ಷ ದ ತೊಗಟೆಯ ಚೂರ್ಣವನ್ನು, ಒಂದೆರಡು ಚಿಟಿಕೆಯಷ್ಟು ಜೇನುತುಪ್ಪದೊಡನೆ ನೆಕ್ಕಿ.
೬) ಒಂದು ಚಮಚ ಅರಿಶಿಣ ಪುಡಿ ಯಲ್ಲಿ ಜೇನುತುಪ್ಪ ಸೇರಿಸಿ, ನೆಕ್ಕಿ.
೭) 4-6 ತುಳಸಿ ಎಲೆ ಮತ್ತು 7-8 ಕರಿಮೆಣಸುನ್ನು ಹಾಕಿ ಕಷಾಯ ಮಾಡಿ, ಅದನ್ನು ಸೋಸಿ, ಎರಡು ಚಮಚ ಜೇನುತುಪ್ಪ ಬೆರೆಸಿ ಸೇವಿಸಿ.

error: Content is protected !!