ಕೂಗು ನಿಮ್ಮದು ಧ್ವನಿ ನಮ್ಮದು

ಮಗುವಿನ ತೊಡೆಗೆ ಬರೆ ಹಾಕಿದ ತಾಯಿಯ ಪ್ರೀಯಕರ: ಆರೋಪಿ ಬಂಧಿಸುವ ತನಕ ಶೇರ್ ಮಾಡಿ

ಚಿತ್ರದುರ್ಗ: ಸಣ್ಣ ಮಕ್ಕಳು ಎಂದರೆ ಯಾರಿಗಿಷ್ಟವಿಲ್ಲ ಹೇಳಿ.. ಆದರೆ ಇಲ್ಲೊಂದು‌ ಮಗುವಿಗೆ ಕೈಕಾಲು ತೊಡೆಗಳ ಮೇಲೆ ಸುಟ್ಟ ಗಾಯಗಳಾಗಿವೆ. ಬಾಸುಂಡೆ ಗುರುತುಗಳಿವೆ. ಇವುಗಳನ್ನು ನೋಡಿದ್ರೆ ಎಂಥವರ ಕರುಳು ಚುರಿಕ್ ಅನ್ನದೇ ಇರದು.

ಮಗುವಿನ ಮನ ಕಲಕುವ ಮಾತು

ಇಂತಹ ಮನ ಕಲಕುವ ಘಟನೆ ನಡೆದಿರುವುದು ಚಿತ್ರದುರ್ಗ ತಾಲೂಕಿನ ಘಟ್ಟಿ ಹೊಸಹಳ್ಳಿ ಗ್ರಾಮದಲ್ಲಿ. ಮಗುವಿನ ತಂದೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ತಾಳ್ಯಾ ಗ್ರಾಮದ ಜಯಪ್ಪ‌. ಈತನಿಗೆ ಚಿತ್ರಹಳ್ಳಿಯ ನಿಂಗಮ್ಮ (ಶೃತಿ) ಜೊತೆಗೆ ಮದುವೆಯಾಗಿತ್ತು. ಪುಟ್ಟ ಗಂಡು ಮಗು ಕೂಡ ಇದೆ. ಇತ್ತೀಚಿಗೆ ಈ‌ ಮಗುವಿನ ತಾಯಿ ನಿಂಗಮ್ಮ ( ಶೃತಿ) ಘಟ್ಟಿ ಹೊಸಹಳ್ಳಿ ಗ್ರಾಮದ ಶಿವಪ್ಪ ಎಂಬ ವ್ಯಕ್ತಿಯ ಜೊತೆ ವಾಸ ಮಾಡುತ್ತಿದ್ದಾಳೆ ಎಂದು‌ ಮಾಹಿತಿ ಸಿಕ್ಕಿದೆ.  ನಿಂಗಮ್ಮನ (ಶೃತಿ) ಪ್ರಿಯಕರ ಶಿವಪ್ಪ ಏನು ಅರಿಯದ ಈ ಕಂದನಿಗೆ ನೀನು‌ ನನ್ನನ್ನೆ ಅಪ್ಪ ಎಂದು ಕರೆಯಬೇಕು ಅಂತ ಚಿತ್ರಹಿಂಸೆ ನೀಡಿದ್ದಾನೆ. ಆ ಮಗು ಸುಟ್ಟ ಗಾಯಗಳು ಹಾಗೂ ಚಪಾತಿ ಲಟ್ಟಿಸುವ ಲಟ್ಟಣಿಗೆ ಏಟಿನ ಬಾಸುಂಡೆಯಿಂದ ನರಳಾಡುತ್ತಿದ್ದು, ಗ್ರಾಮಸ್ಥರ ಮಾನವೀಯತೆಯಿಂದ ಚಿಕಿತ್ಸೆ ಸಿಕ್ಕಂತಾಗಿದೆ. ಈ ಬಗ್ಗೆ ಪೋಲಿಸರಿಗಾಗಲಿ ಮಕ್ಕಳ ರಕ್ಷಣಾ ಇಲಾಖೆಯವರಿಗಾಗಲಿ ಯಾವುದೆ ಮಾಹಿತಿ ಇಲ್ಲ. ಆದರೆ ಈ ಪುಟ್ಟ ಕಂದ ತನಗಾಗುತ್ತಿರುವ ಚಿತ್ರಹಿಂಸೆ ಬಗ್ಗೆ ವಿವರವಾಗಿ ಬಿಚ್ಚಿಟ್ಟಿರುವ ವಿಡಿಯೋ ನ್ಯೂಸ್90 ಗೆ ಲಭ್ಯವಾಗಿದೆ. ನನಗೆ ನಮ್ಮ ತಂದೆ ಜಯಪ್ಪನ ಹತ್ತಿರ ಕರೆದುಕೊಂಡು ಹೋಗಿ ನನಗೆ ತಾಯಿ‌ನೂ ಬೇಡ ಶಿವಪ್ಪನೂ ಬೇಡ ಎಂದು ಅಂಗಲಾಚುತ್ತಿದೆ. ಕೂಡಲೇ ಸಂಬಂಧಿಸಿದ ಇಲಾಖಾಧಿಕಾರಿಗಳು ನೊಂದ ಮಗುವಿನ ರಕ್ಷಣೆ ಮಾಡಬೇಕಾಗಿದೆ. ಅಲ್ಲದೇ ಮಗುವಿನ ಈ ಸ್ಥಿತಿಗೆ ಕಾರಣಕಾದ ಶಿವಪ್ಪ ಹಾಗೂ ನಿಂಗಮ್ಮ (ಶೃತಿ) ಗೆ ತಕ್ಕ ಶಾಸ್ತಿ ಆಗಬೇಕಿದೆ.

error: Content is protected !!