ಚಿಕ್ಕೋಡಿ: ಕಾಲೇಜಿನ ಕಾಂಪೌಂಡ್ಗೆ ಅಳವಡಿಸಿರುವ ಗೇಟ್ ಬಿದ್ದು ಬಾಲಕನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆಯು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಸಂಭವಿಸಿದೆ.
ಇನ್ನೂ ನಗರದ R.Dಕಾಲೇಜಿನ ಗೇಟ್ ಬಿದ್ದು 10 ವರ್ಷದ ಬಾಲಕನೊಬ್ಬ ಸೂಫಿಯಾನ್ ರಾಜು ಮುಲ್ಲಾ ಎಂಬ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕಾಲೇಜಿನ ಗೇಟ್ ದಾಟಿ ಮನೆಗೆ ಹೋಗುತ್ತಿರುವ ಸಮಯದಲ್ಲಿ ಏಕಾಏಕಿ ಕಾಲೇಜಿನ ಗೇಟ್ ಕುಸಿದು ಬಿದ್ದಿದೆ. ಇನ್ನೂ ಸರಿಯಾಗಿ ಜೋಡಣೆ ಮಾಡದಿರುವ ಕಾರಣದಿಂದ ಮಳೆಯಲ್ಲಿ ಶಿಥೀಲಗೊಂಡಿದ್ದ ಕಾಲೇಜಿನ ಗೇಟ್ ಬಾಲಕನ ಮೇಲೆ ಬಿದ್ದಿದೆ. ಇನ್ನೂ ಅಲ್ಲೆ ಇಂದಿರಾ ನಗರದ ನಿವಾಸಿ ಸೂಫಿಯಾನ್ ಮೃತಪಟ್ಟಿದ್ದು, ಈ ಘಟನೆಯಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನೂ ಕಾಲೇಜು ಆಡಳಿತ ಮಂಡಳಿಯ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ರು. ಕೂಡಲೆ ಸ್ಥಳಕ್ಕೆ ಭೇಟಿ ನೀಡಿರುವ ಚಿಕ್ಕೋಡಿ ಪೊಲೀಸರು ಪರಿಶೀಲನೆ ನಡೆಸಿದ್ದು, ನಂತರ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣವನ್ನು ದಾಖಲೆ ಮಾಡಿದ್ದಾರೆ.