ಬೆಳಗಾವಿ: ಮುಖ್ಯಮಂತ್ರಿ ಯಡಿಯೂರಪ್ಪ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಿಂದ ನೇರವಾಗಿ ಹೋಗಿದ್ದು ಹುಕ್ಕೇರಿ ತಾಲ್ಲೂಕಿನ ಸಂಕೇಶ್ವರಕ್ಕೆ. ಹಿರಣ್ಯಕೇಶಿ ನದಿಯಲ್ಲಿ ನೀರು ಉಕ್ಕಿ ಹರಿದಿದ್ದರಿಂದ ತೀರದ ಸುಮಾರು 500 ಮನೆಗಳು ಮುಳುಗಡೆಗೊಂಡಿವೆ.
ಪ್ರತಿವರ್ಷ ಅತಿವೃಷ್ಟಿಯಾದಾಗ ಈ ರೀತಿ ನೀರು ನುಗ್ಗುವುದರಿಂದ ಇಲ್ಲಿನ ನಿವಾಸಿಗಳು ಶಾಶ್ವತ ಪರಿಹಾರಕ್ಕೆ ಒತ್ತಾಯಿಸುತ್ತಿದ್ದಾರೆ. ಕೃಷ್ಣ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಹಿಪ್ಪರಗಿ ಜಲಾಶಯದ ನೀರಿನ ಮಟ್ಟ ಇಂದು 3.20 ಲಕ್ಷ ಕ್ಯೂಸೆಕ್ಸ್ ಮೀರಿದೆ. ಒಳ ಹರಿವು 3.20 ಲಕ್ಷ ಕ್ಯೂಸೆಕ್ಸ್ ಆಗಿದ್ದು ಹೊರ ಹರಿವು 3.19 ಲಕ್ಷ ಕ್ಯೂಸೆಕ್ಸ್ ಆಗಿದೆ.
ಹೀಗಾಗಿ ಪ್ರವಾಹದಿಂದ ಮನೆ ಕಳೆದುಕೊಂಡು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದ ಜನರನ್ನು ಭೇಟಿ ಮಾಡಿದ ಸಿಎಂ ಅವರ ಅಹವಾಲು ಸ್ವಿಕರಿಸಿ ಮಾತನಾಡಿ ಕಳೆದ ನಾಲ್ಕು ದಿನಗಳಿಂದ ಬೀಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಆದ ಅನಾಹುತಕ್ಕೆ ಸರ್ಕಾರ ತಮ್ಮ ಜೋತೆಗೆ ಇದೆ ಆದ ಹಾನಿಯ ಬಗ್ಗೆ ಸರ್ವೆ ನಡೆಸಿ ಪರಿಹಾರ ನೀಡಲಾಗುವದು ಸಂತ್ರಸ್ತರು ಧೈರ್ಯ ಗೆಡದೆ ಕಾಳಜಿ ಕೇಂದ್ರದಲ್ಲಿ ಆರೈಕೆ ಪಡೆದುಕೊಳ್ಳಬೇಕು. ಕಾಳಜಿ ಕೇಂದ್ರದಲ್ಲಿ ಸಚಿವ ಉಮೇಶ ಕತ್ತಿ ನೇತೃತ್ವದ ತಂಡ ಸಕಲ ವ್ಯವಸ್ಥೆ ಮಾಡಿದ್ದಾರೆ ಹಾಗೂ ಮಳೆ ಕಡಮೆತಾದ ಮೇಲೆ ಅಧಿಕಾರಿ ಕಾರಿಗಳು ಸರ್ವೆ ಕಾರ್ಯ ಮಾಡಿದ ನಂತರ ಮನೆ,ಆಸ್ತಿ ಹಾನಿಗೋಳಗಾದ ಜನರಿಗೆ ಸರ್ಕಾರದಿಂದ ಬೇರೆ ಕಡೆ ವಸತಿ ನಿರ್ಮಿಸಿ ಕೊಡಲಾಗುವದು ಎಂದರು