ಕೂಗು ನಿಮ್ಮದು ಧ್ವನಿ ನಮ್ಮದು

ಸಿದ್ದರಾಮಯ್ಯ ಅವರಿಗೆ ಧನ್ಯವಾದ ಹೇಳಿದ ಅಜ್ಜಿ ನಿಂಗವ್ವಾ ಶಿಂಗಾಡಿ

ಸಿದ್ದರಾಮಯ್ಯ ಅವರಿಗೆ ಅಜ್ಜಿ ನಿಂಗವ್ವಾ ಶಿಂಗಾಡಿ ಧನ್ಯವಾದ ಹೇಳಿದ್ದಾರೆ. ನಿಂಗವ್ವಾ ಶಿಂಗಾಡಿ ನಿನ್ನೆ ಬಸ್ ಹತ್ತುವ ವೇಳೆ ಶಿರಬಾಗಿ ನಮಸ್ಕರಿಸಿದ್ದರು. ಅಜ್ಜಿಯ ಫೋಟೋವನ್ನ ಹಾಕಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.

ಸಿದ್ದರಾಮಯ್ಯ ಅವರ ಬಗ್ಗೆ ಮಾತಾಡಿದ್ದಕ್ಕೆ ಖುಷಿ ಆಗಿದೆ ಎಂದು ಅಜ್ಜಿ ಸಂತಸ ಹೊರ ಹಾಕಿದ್ದಾರೆ. ನಿನ್ನೆ ಧಾರವಾಡದಿಂದ ಸವದತ್ತಿಗೆ ಸಂಬಂಧಿಕರ ಮನೆ ವಾಸ್ತು ಶಾಂತಿಗೆ ಹೊರಟ್ಟಿದ್ದೆ. ಈ ವೇಳೆ ಉಚಿತ ಪ್ರಯಾಣಕ್ಕೆ ಬಿಟ್ಟಿದ್ದಕ್ಕೆ ಬಸ್‌ಗೆ ನಮಸ್ಕರಿಸಿ ಹತ್ತಿದೆ. ಎಲ್ಲ ಹೆಣ್ಣು ಮಕ್ಕಳಿಗೆ ಫ್ರೀ ಮಾಡಿದ್ದಕ್ಕೆ ಬಹಳ ಅನುಕೂಲ ಆಗಿದೆ ಎಂದರು

error: Content is protected !!